ಪೋಲೆಂಡ್ ಭೂಪ್ರದೇಶಕ್ಕೆ ನುಗ್ಗಿ ಸ್ಫೋಟಿಸಿದ ರಷ್ಯಾದ ಎರಡು ಕ್ಷಿಪಣಿಗಳು: ಇಬ್ಬರು ಸಾವು - Mahanayaka

ಪೋಲೆಂಡ್ ಭೂಪ್ರದೇಶಕ್ಕೆ ನುಗ್ಗಿ ಸ್ಫೋಟಿಸಿದ ರಷ್ಯಾದ ಎರಡು ಕ್ಷಿಪಣಿಗಳು: ಇಬ್ಬರು ಸಾವು

poland
16/11/2022

ವಾರ್ಸಾ: ರಷ್ಯಾದ ಎರಡು ಕ್ಷಿಪಣಿಗಳು ಮಂಗಳವಾರ ತಡ ರಾತ್ರಿ ಪೋಲೆಂಡ್ ಭೂಪ್ರದೇಶದಲ್ಲಿ ಸ್ಫೋಟಗೊಂಡಿದ್ದು,  ಪರಿಣಾಮವಾಗಿ ಇಬ್ಬರು ಮೃತಪಟ್ಟಿದ್ದಾರೆ.

ಉಕ್ರೇನ್ ನ ಗಡಿಯಲ್ಲಿರುವ ಲುಬ್ಲಿನ್ ವೊವೊಡೆಶಿಪ್ ನಲ್ಲಿರುವ ಪ್ರಜೆವೊಡೋವ್ ನ ಜನನಿಬಿಡ ಪ್ರದೇಶದಲ್ಲಿ ಎರಡು ರಾಕೆಟ್ ಗಳು ಬಿದ್ದಿವೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಘಟನಾ ಸ್ಥಳದಲ್ಲಿ  ಪೊಲೀಸರು ಮತ್ತು ಸೇನೆಯು ಕಾರ್ಯಾಚರಣೆ ನಡೆಸುತ್ತಿದೆ.

ದೇಶದ ಭೂಪ್ರದೇಶದ ಮೇಲೆ ಕ್ಷಿಪಣಿಗಳು ಬೀಳುವ ಸುದ್ದಿ ತಿಳಿದ ಪೋಲೆಂಡ್ ನ ಪ್ರಧಾನ ಮಂತ್ರಿ ಮಾಟೆಸ್ಜ್ ಮೊರಾವಿಕಿ ಅವರು ಮಂತ್ರಿ ಮಂಡಳಿಯ ಭದ್ರತಾ ಮಂಡಳಿ ಸಮಿತಿಯ ಸಭೆಯನ್ನು ಕರೆದಿದ್ದಾರೆ.

ಪೋಲಿಷ್ ವಿದೇಶಾಂಗ ಸಚಿವಾಲಯದ ವಕ್ತಾರ ಲುಕಾಸ್ಜ್ ಜಸಿನಾ ಅವರು ಘಟನೆಯ ಕುರಿತು  ತಕ್ಷಣ ವಿವರಗಳನ್ನು ಪಡೆದಿದ್ದಾರೆ.

ಘಟನೆ ಸಂಬಂಧ ರಷ್ಯಾದ ರಕ್ಷಣಾ ಸಚಿವಾಲಯವು ವರದಿಗಳನ್ನು ನಿರಾಕರಿಸಿದೆ. ‘ಪರಿಸ್ಥಿತಿಯನ್ನು ಉಲ್ಬಣಗೊಳಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಪ್ರಚೋದನೆ’ ಎಂದು ವಿವರಿಸಿದೆ.

ವಾಷಿಂಗ್ಟನ್ ನಲ್ಲಿ, ರಷ್ಯಾದ ಕ್ಷಿಪಣಿಗಳು ಪೋಲೆಂಡ್ ನಲ್ಲಿ ಇಳಿದಿರುವುದನ್ನು ಖಚಿತಪಡಿಸಲು ಸಾಧ್ಯವಿಲ್ಲ ಎಂದು ಪೆಂಟಗನ್ ಹೇಳಿದೆ. ಪೋಲೆಂಡ್ ನಿಂದ ಹೊರಬರುವ ವರದಿಗಳನ್ನು ಖಚಿತಪಡಿಸಲು ಸಾಧ್ಯವಿಲ್ಲ ಮತ್ತು ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು ಪೋಲಿಷ್ ಸರ್ಕಾರದೊಂದಿಗೆ ಕೆಲಸ ಮಾಡುತ್ತಿದೆ ಎಂದು ವೈಟ್ ಹೌಸ್ ಹೇಳಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ