ಏಮ್ಸ್ ಆಸ್ಪತ್ರೆಯಿಂದ ಮಗುವಿಗೆ ನೀಡಿದ ಊಟದಲ್ಲಿ ಜಿರಳೆ ಪತ್ತೆ!
ಇತ್ತೀಚೆಗೆ ಹೊಟೇಲ್ ಗಳ ಊಟ ಸುರಕ್ಷಿತವಲ್ಲ ಎಂಬ ಸ್ಥಿತಿಗೆ ತಲುಪಿದ್ದು, ಸಾರ್ವಜನಿಕರು ಇಂತಹ ಆತಂಕವನ್ನು ಆಗಾಗ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ದೆಹಲಿಯಲ್ಲಿರುವ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್) 4 ವರ್ಷದ ಮಗುವಿಗೆ ನೀಡಿದ ಊಟದಲ್ಲಿ ಜಿರಳೆ ಪತ್ತೆಯಾಗಿದ್ದು, ಈ ಘಟನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಲ್ಕು ವರ್ಷದ ಮಗುವೊಂದು ಕರುಳಿನ ಮೇಲೆ ಪರಿಣಾಮ ಬೀರುವ ಮತ್ತು ಮಲ ಹೊರಹೋಗುವ ಸಮಸ್ಯೆಯ ಚಿಕಿತ್ಸೆಗೆಂದು ದೆಹಲಿ ಏಮ್‌ಗೆ ದಾಖಲಾಗಿದ್ದ. ಬಾಲಕನಿಗೆ ಆಸ್ಪತ್ರೆಯವರು ಊಟ ಕಳುಹಿಸಿಕೊಟ್ಟಿದ್ದರು. ಈ ಊಟದಲ್ಲಿ ಜಿರಳೆ ಪತ್ತೆಯಾಗಿದೆ.
ಈ ಬಗ್ಗೆ ಟ್ವಿಟ್ಟರ್ ನಲ್ಲಿ ಬಳಕೆದಾರರೊಬ್ಬರು ಮಾಹಿತಿ ಹಂಚಿಕೊಂಡಿದ್ದು, ದೆಹಲಿಯ ಪ್ರತಿಷ್ಠಿತ ವೈದ್ಯಕೀಯ ಸೌಲಭ್ಯಗಳ ಭಯಾನಕ ಸ್ಥಿತಿ ಇದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಸ್ತ್ರಚಿಕಿತ್ಸೆ ಬಳಿಕ ವೈದ್ಯರು ಮಗುವಿಗೆ ಮೆದುವಾಗಿರುವ ಆಹಾರ ನೀಡುವಂತೆ ಸೂಚಿಸಿದ್ದರು. ಹಾಗಾಗಿ ಒಂದು ಬಟ್ಟಲಷ್ಟು ಬೇಳೆ ನೀಡುವಂತೆ ಆಸ್ಪತ್ರೆ ಸಿಬ್ಬಂದಿಗಳನ್ನು ಕೇಳಿದ್ದೆ. ಮಗು ಮೊದಲು ತುತ್ತು ತಿನ್ನುತ್ತಿರುವಾಗಲೇ ಜಿರಳೆ ಭಾಗ ಕಾಣಿಸಿತು. ತಕ್ಷಣವೇ ಊಟ ಉಗಿಯುವಂತೆ ಹೇಳಿದೆ ಎಂದು ಮಗುವಿನ ತಾಯಿ ತಿಳಿಸಿದ್ದಾರೆ.
ಇನ್ನೂ ಇಲ್ಲಿ ವೈದ್ಯಕೀಯ ಸೌಲಭ್ಯ ಚೆನ್ನಾಗಿದೆ. ಆದರೆ, ಆಹಾರದ ವಿಚಾರವಾಗಿ ಕಾಳಜಿ ವಹಿಸಬೇಕಿದೆ. ನನ್ನ ಮಗನಿಗೆ ಉತ್ತಮ ವೈದ್ಯಕೀಯ ಸೇವೆ ನೀಡಲಾಗಿದೆ ಎಂದು ಬಾಲಕನ ತಾಯಿ ಹೇಳಿಕೊಂಡಿದ್ದಾರೆ.
ಈ ವಿಚಾರವನ್ನು ಏಮ್ಸ್ ಆಸ್ಪತ್ರೆಯ ಆಡಳಿತ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದು, ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka