ಡಾಂಬರ್ ಗುಂಡಿಗೆ ಬಿದ್ದಿದ್ದ ಕುರಿಗಾಹಿಯನ್ನು ರಕ್ಷಿಸಿದ ಎನ್ ಸಿಸಿ ಬೆಟಾಲಿಯನ್ ಕ್ಯಾಂಪ್ ಟೀಂ ನ ಸದಸ್ಯರು
ತುಮಕೂರು: ರಸ್ತೆಗೆ ಹಾಕುವ ಡಾಂಬರ್ ಸುರಿದಿದ್ದ ಗುಂಡಿಗೆ ಬಿದ್ದಿದ್ದ ಕುರಿಗಳನ್ನು ರಕ್ಷಿಸಲು ಹೋಗಿ ಡಾಂಬರ್ ಗುಂಡಿಗೆ ಬಿದ್ದಿದ್ದ ಕುರಿಗಾಹಿಯನ್ನು ಎನ್ ಸಿಸಿ ಬೆಟಾಲಿಯನ್ ಕ್ಯಾಂಪ್ ಟೀಂ ನ ಸದಸ್ಯರು ರಕ್ಷಿಸಿದ್ದಾರೆ.
ತುಮಕೂರು ತಾಲ್ಲೂಕಿನ ಹಿರೇಹಳ್ಳಿ ಬಳಿಯ ಮಂದಾರಗಿರಿ ಬೆಟ್ಟದ ಪಕ್ಕದಲ್ಲಿ ಈ ಘಟನೆ ನಡೆದಿದೆ. ಮೈತುಂಬ ಡಾಂಬರ್ ಮೆತ್ತಿಕೊಂಡು ಡಾಂಬರ್ ಗುಂಡಿಯಿಂದ ವಾಪಸ್ ಬರಲಾಗದೇ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ವ್ಯಕ್ತಿಯ ಜೀವ ರಕ್ಷಿಸಲಾಗಿದೆ.
ಮಂದಾರಗಿರಿ ಬೆಟ್ಟದ ಬಳಿ ಕುರಿ ಮೇಯಿಸಲು ತೆರಳಿದ್ದ ಕುರಿಗಾಯಿ ಈ ವೇಳೆ ರಸ್ತೆಗೆ ಹಾಕುವ ಡಾಂಬರ್ ಸುರಿದಿದ್ದ ಗುಂಡಿಗೆ ಬಿದ್ದಿರುವ ಸುಮಾರು ಏಳೆಂಟು ಕುರಿಗಳು ಬಿದ್ದಿವೆ. ಕುರಿಗಳನ್ನ ರಕ್ಷಿಸುವ ಭರದಲ್ಲಿ ಆಯತಪ್ಪಿ ಡಾಂಬರ್ ಗುಂಡಿಗೆ ಬಿದ್ದಿದ್ದಾನೆ.
ಸುಮಾರು ಎರಡು ಗಂಟೆಗಳ ಕಾಲ ಡಾಂಬರ್ ಗುಂಡಿಯಲ್ಲೇ ಬಿದ್ದಿದ್ದ ಕುರಿಗಾಯಿಯನ್ನು ಅದೇ ಸಮಯಕ್ಕೆ ಎನ್ ಸಿಸಿ ಕ್ಯಾಂಪ್ ಗೆ ತೆರಳಿದ್ದ ಟೀಂ, ಫೈರಿಂಗ್ ತರಬೇತಿ ಪಡೆಯುವ ವೇಳೆ ಆತನನ್ನ ಗಮನಿಸಿದೆ. ಕೂಡಲೇ ಆತನನ್ನ ಗುಂಡಿಯಿಂದ ಮೇಲಕ್ಕೆ ಎತ್ತಿ ರಕ್ಷಣೆ ಮಾಡಲಾಗಿದೆ. ತುಮಕೂರಿನ ನಾಲ್ಕನೇ ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ಟೀಂನಿಂದ ರಕ್ಷಣೆ ಮಾಡಲಾಗಿದ್ದು
ಎನ್ ಸಿಸಿ ಕ್ಯಾಂಪ್ ತರಬೇತಿಯಲ್ಲಿದ್ದ ಬಿ ಹೆಚ್.ಎಂ. ತಿಲಕ್ ರಾಜ್, ಕೆಡೆಟ್ ಮಹೇಶ್, ಜುಬೇದ್, ಮನೋಜ್, ದರ್ಶನ್ ರಿಂದ ರಕ್ಷಣೆ ಮಾಡಲಾಗಿದೆ. ಅಲ್ಲದೆ ಐದು ಕುರಿಗಳನ್ನು ಸಹ ರಕ್ಷಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97