ಮಂಗಳೂರು: ಕಾರಾಗೃಹದ ಮೇಲೆ ಪೊಲೀಸ್ ದಾಳಿ: ಕೈದಿಗಳ ಬಳಿ ಸಿಕ್ಕಿದ್ದೇನು?
ಮಂಗಳೂರು: ನಗರದ ಕಾರಾಗೃಹದ ಮೇಲೆ ಗುರುವಾರ ಮುಂಜಾನೆ ಪೊಲೀಸರು ದಾಳಿ ನಡೆಸಿದ್ದು, ಮೊಬೈಲ್ ಸೇರಿ ಹಲವು ನಿಷೇಧಿತ ವಸ್ತು ವಶಪಡಿಸಿಕೊಂಡಿದ್ದಾರೆ.
ಮಂಗಳೂರು ಸಿಟಿ ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲ್, ನೇತೃತ್ವದಲ್ಲಿ 150ಕ್ಕೂ ಅಧಿಕ ಪೊಲೀಸರ ತಂಡ ಗುರುವಾರ ಮುಂಜಾನೆ ಹಠಾತ್ ದಾಳಿ ನಡೆಸಿದ್ದು, ಹಲವಾರು ಅಕ್ರಮಗಳು ಬಯಲಾಗಿವೆ. ಕಾರ್ಯಾಚರಣೆಯಲ್ಲಿ 2 ಡಿಸಿಪಿಗಳು, 3 ಎಸಿಪಿಗಳು, 15 ನಿರೀಕ್ಷಕರು ಮತ್ತು ಸುಮಾರು 150 ಸಿಬ್ಬಂದಿ ಪಾಲ್ಗೊಂಡಿದ್ದರು. ಜೈಲಿನ ಎಲ್ಲಾ ಬ್ಲಾಕ್ಗಳನ್ನು ಏಕಕಾಲದಲ್ಲಿ ಕವರ್ ಮಾಡಲು ತಂಡಗಳನ್ನು ರಚಿಸಿ ದಾಳಿ ಮಾಡಲಾಗಿದೆ. ಯಾವ ಸುಳಿವೂ ನೀಡದೆ ಈ ದಾಳಿ ನಡೆಸಿದ ಕಾರಣ ಕೈದಿಗಳು ಬೆಚ್ಚಿಬಿದ್ದಿದ್ದಾರೆ.
ದಾಳಿ ವೇಳೆ ವಿಚಾರಣಾಧೀನ ಕೈದಿಗಳ ಬಳಿ 25 ಮೊಬೈಲ್ ಫೋನ್ ಗಳು, ಒಂದು ಬ್ಲೂಟೂತ್ ಸಾಧನ, 5 ಇಯರ್ ಫೋನ್, ಒಂದು ಪೆನ್ ಡ್ರೈವ್, 5 ಚಾರ್ಜರ್, ಒಂದು ಜೊತೆ ಕತ್ತರಿ, 3 ಕೇಬಲ್, ಗಾಂಜಾ ಪ್ಯಾಕೆಟ್ ಗಳು ಪತ್ತೆಯಾಗಿವೆ ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: