ನೇಜಾರಿನಲ್ಲಿ ತಾಯಿ ಮಕ್ಕಳ ಹತ್ಯೆ ಪ್ರಕರಣ: ಸ್ಥಳ ಮಹಜರು ವೇಳೆ ಆರೋಪಿ ಮೇಲೆ ಹಲ್ಲೆಗೆ ಯತ್ನ: ಲಾಠಿ ಚಾರ್ಜ್ - Mahanayaka
1:13 AM Tuesday 27 - February 2024

ನೇಜಾರಿನಲ್ಲಿ ತಾಯಿ ಮಕ್ಕಳ ಹತ್ಯೆ ಪ್ರಕರಣ: ಸ್ಥಳ ಮಹಜರು ವೇಳೆ ಆರೋಪಿ ಮೇಲೆ ಹಲ್ಲೆಗೆ ಯತ್ನ: ಲಾಠಿ ಚಾರ್ಜ್

nejaru case
16/11/2023

ಮಲ್ಪೆ: ಉಡುಪಿಯ ನೇಜಾರಿನಲ್ಲಿ ತಾಯಿ ಹಾಗೂ ಮೂವರು ಮಕ್ಕಳನ್ನು ಬರ್ಬರವಾಗಿ ಹತ್ಯೆ ನಡೆಸಿದ ಪ್ರಕರಣ ಆರೋಪಿ ಪ್ರವೀಣ್‌ ಪ್ರವೀಣ್ ಅರುಣ್ ಚೌಗುಲೆಯನ್ನು ಸ್ಥಳ ಮಹಜರು ಮಾಡಲು ಕರೆದುಕೊಂಡು ಹೋಗಿದ್ದ ವೇಳೆ ಆರೋಪಿ ಮೇಲೆ ಮೃತರ ಸಂಬಂಧಿಕರು ಹಾಗೂ ಸ್ನೇಹಿತರು ಹಲ್ಲೆಗೆ ಮುಂದಾದ ಘಟನೆ ನಡೆದಿದೆ.

ಆರೋಪಿ ತೋರಿಸಿಕೊಟ್ಟ ಸ್ಥಳ ಮಹಜರು ಮಾಡಲು ಆರೋಪಿಯನ್ನು ಕರೆದುಕೊಂಡ ಬಂದ ಸಮಯದಲ್ಲಿ, ಮೃತರ ಸಂಬಂಧಿಗಳು ಹಾಗೂ ಸ್ನೇಹಿತರು ಆರೋಪಿಯ ವಿರುದ್ದ ಫೋಷಣೆ ಕೂಗಿ ಮಹಜರು ಮುಗಿಸಿ ವಾಪಾಸು ಹೊರಡುವ ಸಮಯದಲ್ಲಿ ವಾಹನವನ್ನು ತಡೆದು ನಿಲ್ಲಿಸುವ ಪ್ರಯತ್ನ ಮಾಡಿದರು.

ಈ ಸಮಯ ಲಘು ಲಾಠಿ ಪ್ರಹಾರ ನಡೆಸಿದ ಪೊಲೀಸರು, ಜನರನ್ನು ಚದುರಿಸಿ ಆರೋಪಿಯನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದಾರೆ.

ಪ್ರಸ್ತುತ ಪರಿಸ್ಥಿತಿ ಶಾಂತವಾಗಿದೆ. ಈ ಬಗ್ಗೆ ಆ ಸಮುದಾಯದ ಹಿರಿಯರೊಂದಿಗೆ ಚರ್ಚಿಸಿ ಶಾಂತಿ ಕಾಪಾಡುವಂತೆ ಪೊಲೀಸರು ಮನವಿ ಮಾಡಿದರು.

ಇತ್ತೀಚಿನ ಸುದ್ದಿ