ನಿಖಿಲ್ ಸ್ಪರ್ಧಿಸುವುದು ಬೇಡ ಎಂದಿದ್ದೆ | ಜನ ಏನು ಹೇಳಿದರೂ ನಂಬುತ್ತಾರೆ ಎಂದ ಕುಮಾರಸ್ವಾಮಿ! - Mahanayaka

ನಿಖಿಲ್ ಸ್ಪರ್ಧಿಸುವುದು ಬೇಡ ಎಂದಿದ್ದೆ | ಜನ ಏನು ಹೇಳಿದರೂ ನಂಬುತ್ತಾರೆ ಎಂದ ಕುಮಾರಸ್ವಾಮಿ!

22/11/2020

ಮದ್ದೂರು: ನಿಖಿಲ್ ಸ್ಪರ್ಧಿಸುವುದು ಬೇಡ ಎಂದು ಹೇಳಿದ್ದೆ. ಆದರೆ ಎಲ್ಲರೂ ಒತ್ತಡ ತಂದು ನಿಖಿಲ್ ಸ್ಪರ್ಧಿಸುವಂತೆ ಮಾಡಿದರು. ಆ ಬಳಿಕ ಎಲ್ಲರೂ ಸೇರಿ ಸೋಲಿಸಿದರು ಎಂದು  ಮಾಜಿ  ಸಿಎಂ ಕುಮಾರಸ್ವಾಮಿ ಭಾವುಕರಾದರು.

ಬ್ಯಾಡರಹಳ್ಳಿಯಲ್ಲಿ ಮಾತನಾಡಿದ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾಸ್ವಾಮಿ ಅವರ ಸೋಲಿನ ಕುರಿತು ಬೇಸರ ವ್ಯಕ್ತಪಡಿಸಿದರು. ಎಲ್ಲರ ಒತ್ತಡದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಬೇಕಾಯಿತು. ಆದರೆ, ಕೊನೆಗೆ ನಮ್ಮನ್ನು ಸೋಲಿಸಿದರು. ಜಿಲ್ಲೆಯ ಜನರು  ಅಮಾಯಕರು ಏನು ಹೇಳಿದರೂ ನಂಬುತ್ತಾರೆ ಎಂದು ಕುಮಾರಸ್ವಾಮಿ ಹೇಳಿದರು.

ರಾಜಕೀಯದಿಂದಲೇ ನಿವೃತ್ತಿಯಾಗಬೇಕು ಎಂದುಕೊಂಡಿದ್ದೆ. ಹಾಗೊಂದು ವೇಳೆ ಮಾಡಿದರೆ ಜನರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂಬ ಕಾರಣಕ್ಕೆ ನಿವೃತ್ತಿಯ ನಿರ್ಧಾರದಿಂದ ಹಿಂದೆ ಸರಿಯಬೇಕಾಯಿತು ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.


Provided by

ಇತ್ತೀಚಿನ ಸುದ್ದಿ