24 ಗಂಟೆಗಳಲ್ಲಿ ಒಂದರ ಹಿಂದೊಂದರಂತೆ 78 ಗೋವುಗಳ ಸಾವು - Mahanayaka
9:49 AM Sunday 15 - September 2024

24 ಗಂಟೆಗಳಲ್ಲಿ ಒಂದರ ಹಿಂದೊಂದರಂತೆ 78 ಗೋವುಗಳ ಸಾವು

22/11/2020

ಜೈಪುರ:  ತೋಟವೊಂದರಲ್ಲಿ 24 ಗಂಟೆಗಳ ಅವಧಿಯಲ್ಲಿ ಒಂದರ ಹಿಂದೊಂದರಂತೆ ಕನಿಷ್ಠ 78 ಹಸುಗಳು ಮೃತಪಟ್ಟಿರುವ  ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದ್ದು, ಹಸುಗಳು ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿವೆ ಎಂದು ತಿಳಿದು ಬಂದಿದೆ.

ರಾಜಸ್ಥಾನದ ಚುರು ಜಿಲ್ಲೆಯ ತೋಟವೊಂದರಲ್ಲಿ ಈ ಘಟನೆ ನಡೆದಿದೆ.  ಸರ್ದರ್ಶಹರ್‌ ಬಿಲ್ಲುಪಸ್ ರಾಂಪುರ ಗ್ರಾಮದ ಖಾಸಗಿ ಜಮೀನಿನಲ್ಲಿ ಈ ಘಟನೆ ನಡೆದಿದೆ. ಆಹಾರದಲ್ಲಿ ವಿಷ ವಸ್ತುಗಳನ್ನು ಸೇವಿಸಿ ಹಸುಗಳು ಮೃತಪಟ್ಟಿವೆ ಎಂದು ಶಂಕಿಸಲಾಗಿದೆ.

ಹಸುಗಳಿಗೆ ನೀಡಲಾಗಿರುವ ಆಹಾರದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಸುಗಳಿಗೆ ಆಹಾರ ನೀಡಿದ ಬಳಿಕ ಈ ಘಟನೆ ನಡೆದಿರುವುದರಿಂದಾಗಿ  ಆಹಾರದಲ್ಲಿ ವಿಷದ ಮಾದರಿಗಳಿರುವ ಬಗ್ಗೆ ಶಂಕೆ ಹೆಚ್ಚಾಬಲಗೊಂಡಿದೆ.


Provided by

ಇತ್ತೀಚಿನ ಸುದ್ದಿ