ಇಡಿಯಿಂದ ಯಾವುದೇ ನೋಟಿಸ್ ಬಂದಿಲ್ಲ: ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ - Mahanayaka

ಇಡಿಯಿಂದ ಯಾವುದೇ ನೋಟಿಸ್ ಬಂದಿಲ್ಲ: ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ

satish jarakiholi
25/09/2026

ಮೈಸೂರು: ಜಾರಿ ನಿರ್ದೇಶನಾಲಯದಿಂದ (ED) ತಮಗೆ ಯಾವುದೇ ನೋಟಿಸ್ ಬಂದಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೋಟಿಸ್ ಕೊಟ್ಟರೆ ಹೋಗಿ ಉತ್ತರ ನೀಡುತ್ತೇನೆ. ಆದರೆ, ಈ ದಾಳಿ ಅಥವಾ ರೈಡ್ ಯಾಕೆ ಆಯಿತು ಎಂಬುದನ್ನು ತಿಳಿದುಕೊಳ್ಳಲು ಸ್ವಲ್ಪ ಸಮಯ ಬೇಕು ಎಂದು ತಿಳಿಸಿದ್ದಾರೆ.

ಈ ವೇಳೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಕಳೆದ 12 ವರ್ಷಗಳಲ್ಲಿ ಬಿಜೆಪಿಯ ಯಾವೊಬ್ಬ ನಾಯಕನ ಮೇಲೆಯೂ ಇಡಿ ರೈಡ್ ಆಗಿಲ್ಲ. ಬಿಜೆಪಿಯವರ ವಿರುದ್ಧ ದೂರು ನೀಡಿದರೂ ಅವರು ರೈಡ್ ಮಾಡುವುದಿಲ್ಲ” ಎಂದು ಟಾಂಗ್ ನೀಡಿದರು. ಕೇಂದ್ರ ಸರ್ಕಾರದ ಯೋಜನೆಯಲ್ಲಿ ತಾವೇಷ್ಟೂ ಕಮಿಷನ್ ಪಡೆದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.

ಹೊಸ ಯೋಜನೆಗಳಿಗೆ ಸರ್ಕಾರದ ಬಳಿ ಹಣವಿಲ್ಲ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಯಾವುದೇ ಸರ್ಕಾರವಿದ್ದರೂ ಆರ್ಥಿಕ ಇಲಾಖೆ ಇಂತಹ ಪತ್ರಗಳನ್ನು ಬರೆಯುವುದು ಸಹಜ. ಅದರರ್ಥ ಸರ್ಕಾರದ ಬಳಿ ಹಣವಿಲ್ಲ ಎಂದಲ್ಲ, ಬಜೆಟ್ ಹೊರತುಪಡಿಸಿ ಹೊಸ ಯೋಜನೆಗಳನ್ನು ಘೋಷಿಸುವಾಗ ಇತಿಮಿತಿಯಲ್ಲಿ ಮಾಡಬೇಕಾಗುತ್ತದೆ ಎಂದು ತಿಳಿಸಿದರು.

ಸಿಎಂ ಸಿದ್ದರಾಮಯ್ಯ ಅವರೊಂದಿಗಿನ ಸಂಬಂಧದ ಕುರಿತು ಮಾತನಾಡಿದ ಅವರು, “ನಮ್ಮಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ, ಎಲ್ಲವೂ ಚೆನ್ನಾಗಿದೆ. ಸಿದ್ದರಾಮಯ್ಯ ಅವರ ಜೊತೆ ಆಪ್ತ ಸೈನಿಕರ ಪಡೆ (ಆರ್ಮಿ) ಇದೆ” ಎಂದರು. ಮುಂದುವರಿದು, “ಅವಕಾಶ ಸಿಕ್ಕರೆ ನಾನು ಸಿಎಂ ಆಗುತ್ತೇನೆ. ಆದರೆ ನಾನೇ ಈಗಲೇ ಸಿಎಂ ಎಂದು ಹೇಳಿಕೊಂಡಿಲ್ಲ. ನನಗೆ ಇನ್ನೂ ವಯಸ್ಸಿದೆ, ಯಾವುದೇ ಆತುರವಿಲ್ಲ” ಎಂದು ತಮ್ಮ ಸಿಎಂ ಆಕಾಂಕ್ಷೆಯನ್ನು ಮುಕ್ತವಾಗಿ ಹೊರಹಾಕಿದರು.

ಇತ್ತೀಚಿನ ಸುದ್ದಿ

deneme bonusu veren siteler gamdom giriş deneme bonusu veren siteler