ಬೆಲೆ ಏರಿಕೆ ಬಿಸಿಗೆ ಕೆಂಪಾದ ಗ್ರಾಹಕರು: ಈಗ ಟೀ ಕಾಫಿ ಬೆಲೆಯೂ 5ರಿಂದ 10 ರೂ. ಏರಿಕೆ! - Mahanayaka

ಬೆಲೆ ಏರಿಕೆ ಬಿಸಿಗೆ ಕೆಂಪಾದ ಗ್ರಾಹಕರು: ಈಗ ಟೀ ಕಾಫಿ ಬೆಲೆಯೂ 5ರಿಂದ 10 ರೂ. ಏರಿಕೆ!

tea coffee
05/04/2025

ಬೆಂಗಳೂರು: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಒಂದರ ಹಿಂದೊಂದರಂತೆ ಬೆಲೆ ಏರಿಕೆ ಶಾಕ್ ನೀಡುತ್ತಿದೆ.


Provided by

ರಾಜ್ಯ ಸರ್ಕಾರ ಹಾಲಿನ ಬೆಲೆ, ವಿದ್ಯುತ್ ದರ, ಕಸ ಸಂಗ್ರಹಣೆ ದರ ಹಾಗೂ ಡೀಸೆಲ್ ದರ ಹೆಚ್ಚಿಸಿದೆ. ಕೇಂದ್ರ ಸರ್ಕಾರ ಟೋಲ್ ದರಗಳನ್ನು ಹೆಚ್ಚಿಸಿದೆ.

ಈ ಎಲ್ಲದರ ವಿರುದ್ಧ ಸಾರ್ವಜನಿಕರು ಪ್ರತಿಭಟನೆಗೆ ಮುಂದಾಗುತ್ತಿದ್ದಂತೆಯೇ ಇದೀಗ ಟೀ, ಕಾಫಿ ದರ ಕೂಡ ಏರಿಕೆಯಾಗಿದೆ. ಬೆಲೆ ಏರಿಕೆಯ ಅಬ್ಬರದಲ್ಲಿ ಜನರು ಉಸಿರಾಡಲಾಗದ ಪರಿಸ್ಥಿತಿ ಸದ್ಯ ನಿರ್ಮಾಣವಾಗಿದೆ.

ಹಾಲು ದರ ಏರಿಕೆ ಎಫೆಕ್ಟ್ ನಿಂದ ಟೀ, ಕಾಫಿ ದರ ಕೂಡ ಏರಿಕೆಯಾಗಿದೆ. ಟೀ ಅಂಗಡಿ ಮುಂದೆ ದರ ಏರಿಕೆ ಬೋರ್ಡ್ ಅಳವಡಿಕೆ ಮಾಡಲಾಗಿದೆ. ಹಾಲು, ಕಾಫಿ, ಹಾಗೂ ಟೀ ಪುಡಿ ಹೆಚ್ಚಳದಿಂದ ದರ ಏರಿಕೆ ಮಾಡಲಾಗಿದೆ ಎಂದು ಬೋರ್ಡ್ ನಲ್ಲಿ ಬರೆಯಲಾಗಿದೆ.

ಒಂದು ಗ್ಲಾಸ್ ಕಾಫಿ ಮತ್ತು ಟೀ ಬೆಲೆ 5 ರಿಂದ 10 ರೂಪಾಯಿವರೆಗೆ ಏರಿಕೆ ಮಾಡಲು ತೀರ್ಮಾನಿಸಲಾಗಿದೆ. ಈಗಾಗಲೇ ಸಾಕಷ್ಟು ಹೋಟೆಲ್ ಗಳು ಬೆಲೆ ಏರಿಕೆ ಮಾಡಿದೆ. ಸರ್ಕಾರ ಒಂದು ಲೀಟರ್ ಹಾಲಿಗೆ 4 ರೂಪಾಯಿ ಏರಿಕೆ ಮಾಡಿದೆ. ಆದ್ರೆ ಹೋಟೆಲ್ ಗಳು 100 ಗ್ರಾಂ ಕಾಫಿ, ಟೀಗೆ 5 ರೂಪಾಯಿ ಏರಿಕೆ ಮಾಡಿದ್ದಾರೆ ಹೀಗಾಗಿ ಜನಸಾಮಾನ್ಯರು ಈ ದುಬಾರಿ ದುನಿಯಾದಲ್ಲಿ ಬದುಕೋದು ಹೇಗಪ್ಪಾ ಅಂತ ಚಿಂತೆಗೆ ಬಿದ್ದಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

 

ಇತ್ತೀಚಿನ ಸುದ್ದಿ