ಮರಿಯಮ್ ನಿಕೇತನ ಶಾಲಾ ವಿದ್ಯಾರ್ಥಿಗಳ ಒಲಂಪಿಯಾಡ್ ಸಾಧನೆ

ಮೂಡುಬಿದಿರೆ: ಬೆಳುವಾಯಿ ಮರಿಯಮ್ ನಿಕೇತನ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಒಲಂಪಿಯಾಡ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದು, ಶಾರ್ವಿ ಹಾಗೂ ಪ್ರಾಪ್ರಿ ಎಕ್ಸಲೆನ್ಸ್ ಆವಾರ್ಡ್, ಮಹಮ್ಮದ್ ಅಬ್ದುಲ್ ಮನನ್ ಸಮಾಜವಿಜ್ಞಾನದಲ್ಲಿ ರಾಜ್ಯಕ್ಕೆ ನಾಲ್ಕನೇ ರಾಂಕ್ ಹಾಗೂ ನಗದು ಪುರಸ್ಕಾರ, ಆಯೇಷಾ ರಿಝಾ ಕಂಪ್ಯೂಟರ್ ಒಲಂಪಿಯಾಡ್ ನಲ್ಲಿ ರಾಜ್ಯಕ್ಕೆ ಎಂಟನೇ ರಾಂಕ್ ಹಾಗೂ ನಗದು ಬಹುಮಾನ ಪಡೆದಿದ್ದಾರೆ.
ಅಲ್ಲದೇ ಶಾಲೆಯ ಮುಖ್ಯ ಶಿಕ್ಷಕಿ “ಬೆಸ್ಟ್ ಪ್ರಿನ್ಸಿಪಾಲ್ ಅವಾರ್ಡ್ ” , ಐವರು ಶಿಕ್ಷಕಿಯರಿಗೆ, “ಇನ್ಸ್ಪೈರ್ ಟೀಚರ್ಸ್ ಅವಾರ್ಡ್” ಹಾಗೂ ಶಾಲೆಗೆ “ಗೋಲ್ಡ್ ಸ್ಕೂಲ್ ಅವಾರ್ಡ್ ” ಗೌರವ ದೊರಕಿರುವುದಲ್ಲದೆ, ಒಟ್ಟಾರೆಯಾಗಿ 9 ವಿದ್ಯಾರ್ಥಿಗಳು ಚಿನ್ನದ ಪದಕ, 2 ವಿದ್ಯಾರ್ಥಿಗಳು ಬೆಳ್ಳಿಯ ಪದಕ ಹಾಗೂ 2 ವಿದ್ಯಾರ್ಥಿಗಳು ಕಂಚಿನ ಪದಕವನ್ನು ಪಡೆದು ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ ಎಂದು ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಜೆಸಿಂತಾ ಲಸ್ರಾದೋ ಸಂತೋಷ ವ್ಯಕ್ತಪಡಿಸಿದ್ದಾರೆ.
ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಳ್ವಾಸ್ ಕಾಲೇಜಿನ ಉಪನ್ಯಾಸಕ ಅಶೋಕ್ ಆಚಾರ್ಯ ಹಾಗೂ ಅಬೂಬಕ್ಕರ್ ಸಿದ್ದಿಕ್ ಮಸ್ಜಿದ್, ಬೆಳುವಾಯಿಯ ಧರ್ಮಗುರುಗಳಾದ ಮೌಲಾನ ಅಬ್ದುಲ್ ಬಾಸಿತ್ ಅವರು ಪಾಲ್ಗೊಂಡು ವಿದ್ಯಾರ್ಥಿಗಳ ಸಾಧನೆಯನ್ನು ಕೊಂಡಾಡಿ ಶುಭ ಹಾರೈಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD