ಚಾಮರಾಜನಗರ: ಜಮೀನಿನಲ್ಲಿ ಜೋಡಿ‌ ಹುಲಿ: ರೈತರ ಕ್ಯಾಮರಾದಲ್ಲಿ ವ್ಯಾಘ್ರ ಸೆರೆ - Mahanayaka

ಚಾಮರಾಜನಗರ: ಜಮೀನಿನಲ್ಲಿ ಜೋಡಿ‌ ಹುಲಿ: ರೈತರ ಕ್ಯಾಮರಾದಲ್ಲಿ ವ್ಯಾಘ್ರ ಸೆರೆ

chamarajanagara
30/11/2022

ಚಾಮರಾಜನಗರ: ರೈತನ ಜಮೀನಿನಲ್ಲಿ ಎರಡು ಹುಲಿ ಕಾಣಿಸಿಕೊಂಡು ಭಯಭೀತಗೊಳಿಸಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ  ಕೊಡಸೋಗೆ ಗ್ರಾಮದಲ್ಲಿ ನಡೆದಿದೆ.

ಕೊಡಸೋಗೆ ಗ್ರಾಮದ ರವಿ ಎಂಬವರ  ಮುಸುಕಿನ ಜೋಳದ ಹೊಲದಲ್ಲಿ ಎರಡು ಹುಲಿಗಳು ಮಂಗಳವಾರ ಬೆಳಗ್ಗೆ ಕಾಣಿಸಿಕೊಂಡಿದ್ದು ಸಂಜೆ ಹಂದಿಯೊಂದನ್ನು ಬೇಟೆಯಾಡಿ ತಿಂದು ಕಾಡಿನತ್ತ ಓಡಿದ್ದರೂ ರೈತರಲ್ಲಿ ಆತಂಕ ಕಡಿಮೆಯಾಗಿಲ್ಲ. ತೆರಕಣಾಂಬಿ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ ಸದ್ಯ ಸ್ಥಳದಲ್ಲೇ ಇದ್ದಾರೆ.

ಹುಲಿ ಓಡಾಟ, ಪೇರಿ ಕೀಳುವ ದೃಶ್ಯಗಳನ್ನು ರೈತರು ತಮ್ಮ ಮೊಬೈಲ್ ಗಳಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಿಗೆ ಅಪ್ ಲೋಡ್ ಮಾಡಿದ್ದು ವೀಡಿಯೋ ವೈರಲ್ ಆಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ