ಪ್ಯಾರಾಚೂಟ್ ನ ಹಗ್ಗ ತುಂಡಾಗಿ ಸಮುದ್ರಕ್ಕೆ ಬಿದ್ದ ದಂಪತಿ - Mahanayaka

ಪ್ಯಾರಾಚೂಟ್ ನ ಹಗ್ಗ ತುಂಡಾಗಿ ಸಮುದ್ರಕ್ಕೆ ಬಿದ್ದ ದಂಪತಿ

parachute
16/11/2021

ರಾಜ್ ಕೋಟ್: ದಿಯುನಲ್ಲಿ ಪ್ಯಾರಾಸೈಲಿಂಗ್ ಮಾಡುತ್ತಿರುವ ವೇಳೆ ಪ್ಯಾರಾಚೂಟ್ ನ ಹಗ್ಗ ತುಂಡಾಗಿ ದಂಪತಿ ಸಮುದ್ರಕ್ಕೆ ಬಿದ್ದ ಘಟನೆ ನಡೆದಿದ್ದು, ಈ ವೇಳೆ ತಕ್ಷಣವೇ ಜೀವರಕ್ಷಕದಳದ ಸಿಬ್ಬಂದಿ ದಂಪತಿಯನ್ನು ರಕ್ಷಿಸಿದ್ದಾರೆ.


Provided by

ದಂಪತಿಗಳಾದ ಅಜಿತ್ ಕಥಾಡ್ ಮತ್ತು ಪತ್ನಿ ಸರಳಾ ಪ್ಯಾರಾಸೈಲಿಂಗ್ ಮಾಡುವಾಗ ಏಕಾಏಕಿ ಪ್ಯಾರಾಚೂಟ್ ನ ಹಗ್ಗ ತುಂಡಾಗಿತ್ತು. ಪರಿಣಾಮವಾಗಿ ಇಬ್ಬರು ಕೂಡ ಸಮುದ್ರಕ್ಕೆ ಬಿದ್ದಿದ್ದಾರೆ. ಘಟನೆಯಿಂದ ಕೆಲ ಕಾಲ ಸ್ಥಳದಲ್ಲಿ ಗೊಂದಲಕರ ವಾತಾವರಣ ಸೃಷ್ಟಿಯಾಯಿತು. ದಂಪತಿ ಲೈಫ್ ಜಾಕೆಟ್ ಧರಿಸಿದ್ದರಿಂದಾಗಿ ಸಂಭಾವ್ಯ ದುರಂತ ತಪ್ಪಿದೆ. ಮಾತ್ರವಲ್ಲದೇ ತಕ್ಷಣದಲ್ಲಿಯೇ ಜೀವ ರಕ್ಷಕ ದಳದ ಸಿಬ್ಬಂದಿ ದಂಪತಿಯನ್ನು ರಕ್ಷಿಸಿದ್ದಾರೆ.

ಅಜಿತ್ ಕಥಾಡ್ ಅವರ ಸಹೋದರ ರಾಕೇಶ್ ತಮ್ಮ ಅಣ್ಣ ಹಾಗೂ ಅತ್ತಿಗೆ ಪ್ಯಾರಾಸೈಲಿಂಗ್ ಮಾಡುತ್ತಿರುವುದನ್ನು ಕೆಳಗೆ ನಿಂತು ವಿಡಿಯೋ ಮಾಡುತ್ತಿದ್ದರು. ಇದೇ ವೇಳೆ ಈ ಘಟನೆ ನಡೆದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಕೇಶ್, ನಾನು ವಿಡಿಯೋವನ್ನು ರೆಕಾರ್ಡ್ ಮಾಡುತ್ತಿದ್ದೆ. ಈ ವೇಳೆ ಹಗ್ಗ ಮುರಿದು ಅವರಿಬ್ಬರೂ ಕೆಳಗೆ ಬಿದ್ದಾಗ ಏನು ಮಾಡಬೇಕು ಎನ್ನುವುದು ತೋಚಲಿಲ್ಲ. ಅವರು ನೀರಿಗೆ ಬೀಳುತ್ತಿರುವುದನ್ನು  ನೋಡಿ ಎಲ್ಲರನ್ನೂ ಸಹಾಯಕ್ಕಾಗಿ ಕೂಗಿದೆ ಎಂದು ಅವರು ಹೇಳಿದರು.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG

ಇನ್ನಷ್ಟು ಸುದ್ದಿಗಳು

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ: 14 ರಾಜ್ಯಗಳ 76 ಸ್ಥಳಗಳಲ್ಲಿ ಜಾಲಾಡಿದ ಸಿಬಿಐ

ಕುಡಿದು ತೂರಾಡುತ್ತಾ, ತೊದಲು ಮಾತನಾಡುತ್ತಾ ಶಾಲೆಗೆ ಪಾಠ ಮಾಡಲು ಬಂದ ಶಿಕ್ಷಕ

ಪ್ರತಾಪ್ ಸಿಂಹ ಹೆಣ್ಣೋ ಗಂಡೋ ಎಂದು ನೋಡಿಕೊಳ್ಳಲಿ | ಇಕ್ಬಾಲ್ ಅನ್ಸಾರಿ ತಿರುಗೇಟು

ಪ್ರವಚನ ನೀಡುತ್ತಲೇ ವೇದಿಕೆಯಲ್ಲಿಯೇ ಹೃದಯಾಘಾತದಿಂದ ನಿಧನರಾದ ಸ್ವಾಮೀಜಿ

ಅನೈತಿಕ ಪೊಲೀಸ್ ಗಿರಿ:  ವಿದ್ಯಾರ್ಥಿಗೆ ಹಲ್ಲೆ ನಡೆಸಿ, ವಿದ್ಯಾರ್ಥಿನಿಗೆ ಬೆದರಿಕೆ ಹಾಕಿದ ಪುಂಡರು

ಡಿಬೆಟ್ ಗೆ ಬನ್ನಿ, ನನ್ನ ಹಿಂದುತ್ವ ಏನು ಅಂತ ಬೋಧನೆ ಮಾಡುತ್ತೇನೆ | ದೀಪು ಶೆಟ್ಟಿಗಾರ್ ಸವಾಲು

ಪುನೀತ್ ಎಲ್ಲ ಚಿತ್ರಗಳಲ್ಲಿಯೂ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿದ್ದಾರೆ | ರಮೇಶ್ ಜಾರಕಿಹೊಳಿ ಭಾವುಕ

ಇತ್ತೀಚಿನ ಸುದ್ದಿ