ಫೋನ್ ಕರೆ ಸ್ವೀಕರಿಸುವ ಗಡಿಬಿಡಿಯಲ್ಲಿ ತೋಳಿನ ಮಧ್ಯೆ ವಾಟರ್ ಹೀಟರ್ ಇಟ್ಟ ವ್ಯಕ್ತಿ ಸಾವು!
ತೆಲಂಗಾಣ: ನೀರು ಕಾಯಿಸಲು ಹೋದ ವೇಳೆ ಫೋನ್ ಕರೆ ಬಂದಿದ್ದು, ಫೋನ್ ಕರೆ ಸ್ವೀಕರಿಸುವ ಗಡಿಬಿಡಿಯಲ್ಲಿ ವ್ಯಕ್ತಿ ಬಕೆಟ್ ನಲ್ಲಿ ಇಡಬೇಕಿದ್ದ ವಾಟರ್ ಹೀಟರ್ ನ್ನು ತೋಳಿನ ಮಧ್ಯೆ ಇಟ್ಟುಕೊಂಡಿದ್ದು, ಪರಿಣಾಮವಾಗಿ ವಿದ್ಯುತ್ ಶಾಕ್ ಹೊಡೆದು ವ್ಯಕ್ತಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ತೆಲಂಗಾಣದ ಖಮ್ಮಾಮ್ ಎಂಬ ಪ್ರದೇಶದ ಬಳಿಯ ಹನುಮಾನ್ ದೇವಸ್ಥಾನದ ಬಳಿಯ ನಿವಾಸಿ 40 ವರ್ಷದ ದೊನ್ನೆಪುಡಿ ಮಹೇಶ್ ಬಾಬು ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಮಹೇಶ್ ಬಾಬು ಅವರು ನಾಯಿಗೆ ಸ್ನಾನ ಮಾಡಿಸಲು ಬಿಸಿ ನೀರು ಕಾಯಿಸಲು ವಾಟರ್ ಹೀಟರ್ ತೆಗೆದುಕೊಂಡು ಹೋಗಿ ಸ್ವಿಚ್ ಆನ್ ಮಾಡಿದ್ದರು. ಈ ನಡುವೆ ಮೊಬೈಲ್ ಗೆ ಫೋನ್ ಕರೆ ಬಂದಿತ್ತು, ಫೋನ್ ಕರೆ ಸ್ವೀಕರಿಸಿದ ಬಳಿಕ ಸ್ವಿಚ್ ಆನ್ ಮಾಡಿರುವುದನ್ನು ಮರೆತು ವಾಟರ್ ಹೀಟರ್ ತೋಳಿನ ಮಧ್ಯೆ ಇರಿಸಿಕೊಂಡಿದ್ದಾರೆ. ಈ ವೇಳೆ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವಿದ್ಯುತ್ ಶಾಕ್ ಹೊಡೆದು ಬಾತ್ ರೂಮ್ ನಲ್ಲಿ ಮಹೇಶ್ ಬಾಬು ಬಿದ್ದಿದ್ದರು. ಪತ್ನಿ ದುರ್ಗಾದೇವಿ ಪತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ಮಹೇಶ್ ಸಾವನ್ನಪ್ಪಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth