ವಿತ್ತ ಸಚಿವೆಯಿಂದ ಬಜೆಟ್ ಮಂಡನೆ: ಟಿವಿ, ಮೊಬೈಲ್ ಸೇರಿ ಅನೇಕ ಉತ್ಪನ್ನಗಳ ಮೇಲಿನ ತೆರಿಗೆ ಇಳಿಕೆ - Mahanayaka

ವಿತ್ತ ಸಚಿವೆಯಿಂದ ಬಜೆಟ್ ಮಂಡನೆ: ಟಿವಿ, ಮೊಬೈಲ್ ಸೇರಿ ಅನೇಕ ಉತ್ಪನ್ನಗಳ ಮೇಲಿನ ತೆರಿಗೆ ಇಳಿಕೆ

01/02/2025


Provided by

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದಿನ ಬಜೆಟ್ ನಲ್ಲಿ LED ಟಿವಿ-ಮೊಬೈಲ್, ಕ್ಯಾನ್ಸರ್ ಔಷಧಗಳ ಮೇಲಿನ ತೆರಿಗೆ, ಮೀನಿನ ಪ್ಲೇಟಿನ ಮೇಲಿನ ತೆರಿಗೆ ಸೇರಿದಂತೆ ಹಲವು ಉತ್ಪನ್ನಗಳ ಮೇಲಿನ ತೆರಿಗೆ ಇಳಿಸುವುದಾಗಿ ಘೋಷಿಸಿದ್ದಾರೆ. ಪ್ಲಾಸ್ಟಿಕ್‌ ಉಪಕರಣಗಳ ಮೇಲಿನ ಕಸ್ಟಮ್ಸ್ ಸುಂಕ ಶೇ.25ರಷ್ಟು ಹೆಚ್ಚಳ, ಟೆಲಿಕಾಂ ಉಪಕರಣಗಳ ಮೇಲಿನ ಕಸ್ಟಮ್ಸ್ ಸುಂಕ ಶೇ.10-ಶೇ.15ರಷ್ಟು ಹೆಚ್ಚಳ ಮಾಡಲಾಗಿದೆ.

ಈ ಬಾರಿಯ ಬಜೆಟ್ ನಲ್ಲಿ ತೆರಿಗೆ ಇಳಿಕೆ ಮಾಡಿರುವುದರ ಪರಿಣಾಮ ಒಂದಷ್ಟು ಉತ್ಪನ್ನ, ಪದಾರ್ಥಗಳ ಬೆಲೆಯೂ ಇಳಿಕೆಯಾಗಿದೆ.
ಔಷಧಿ ಮತ್ತು ಎಲೆಕ್ಟ್ರಿಕ್ ಕಾರುಗಳು, ಎತರ್ನೆಟ್ ಸ್ವಿಚ್, ಭಾರತದಲ್ಲಿ ತಯಾರಿಸಿದ ಬಟ್ಟೆಗಳು, ಚರ್ಮದ ವಸ್ತುಗಳು ಅಗ್ಗವಾಗಲಿವೆ. ದೋಣಿ, ಹಡಗು ತಯಾರಿಸಲು ಬಳಸುವ ಸಾಮಗ್ರಿಗಳ ಮೇಲಿನ ಕಸ್ಟಮ್ಸ್ ಮುಂದಿನ 10 ವರ್ಷದವರೆಗೆ ವಿನಾಯತಿ ನೀಡಲಾಗಿದೆ.

ಝಿಂಕ್, ಲಿಥಿಯಮ್ ಬ್ಯಾಟರಿಯ ಸ್ಕ್ರ್ಯಾಪ್ ಮೇಲಿನ ತೆರಿಗೆ, ಮೊಬೈಲ್ ಫೋನ್ ತಯಾರಿಕೆಗೆ ಬಳಸುವ 28 ಸರಕುಗಳ ಮೇಲಿನ ತೆರಿಗೆ, ಮೀನಿನ ಪ್ಲೇಟಿನ ಮೇಲಿನ ತೆರಿಗೆ, ಇವಿ ಬ್ಯಾಟರಿಗಳ ಮೇಲಿನ ತೆರಿಗೆ, ಜೀವ ಉಳಿಸುವ ಔಷಧಗಳ ಮೇಲಿನ ತೆರಿಗೆ, ಖನಿಜಗಳ ಮೇಲಿನ ತೆರಿಗೆ ಇಳಿಸಲಾಗಿದೆ.

ದುಬಾರಿಯಾಗುವ ವಸ್ತುಗಳ ಪಟ್ಟಿಯಲ್ಲಿ ನೇಯ್ಗೆಯ ಬಟ್ಟೆಗಳು ಐಶಾರಾಮಿ ಸರಕುಗಳು, ಆಲ್ಕೋಹಾಲ್‌, ತಂಬಾಕು, ಟೆಲಿಕಾಂ ಉಪಕರಣ, ಸಿಗರೇಟ್‌, ಚಿನ್ನ-ಬೆಳ್ಳಿ ಸೇರಿವೆ/ ಫ್ಲ್ಯಾಟ್ ಪ್ಯಾನೆಲ್ ಡಿಸ್ ಪ್ಲೇ ಮೇಲೆ ತೆರಿಗೆ, ವಿಮಾನ ಇಂಧನ, ವಿಮಾನ ಟಿಕೆಟ್‌ ದರದ ಮೇಲೆ ತೆರಿಗೆ ಹೆಚ್ಚಿಸಲಾಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ