ಎಸ್ ಐಟಿ ವಶದಲ್ಲಿರುವಾಗ ಅನುಭವಿಸಿದ ಕಷ್ಟ ಕೋರ್ಟ್ ನಲ್ಲಿ ಹೇಳಿದ ಪ್ರಜ್ವಲ್ ರೇವಣ್ಣ! - Mahanayaka

ಎಸ್ ಐಟಿ ವಶದಲ್ಲಿರುವಾಗ ಅನುಭವಿಸಿದ ಕಷ್ಟ ಕೋರ್ಟ್ ನಲ್ಲಿ ಹೇಳಿದ ಪ್ರಜ್ವಲ್ ರೇವಣ್ಣ!

prajwal revanna case
31/05/2024

ಬೆಂಗಳೂರು:  ಅಶ್ಲೀಲ ವಿಡಿಯೋ ಹಾಗೂ ಲೈಂಗಿಕ ದೌರ್ಜನ್ಯ  ಆರೋಪ ಎದುರಿಸುತ್ತಿರುವ ಸಂಸದ ಪ್ರಜ್ವಲ್ ರೇವಣ್ಣರನ್ನು ಗುರುವಾರ ತಡರಾತ್ರಿ ಪೊಲೀಸರು ಬಂಧಿಸಿದ್ದರು, ಶುಕ್ರವಾರ ಬೌರಿಂಗ್ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ಮಾಡಿಸಿದ ಬಳಿಕ ಅವರನ್ನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ವರದಿಗಳ ಪ್ರಕಾರ,  ವಿಮಾನ ನಿಲ್ದಾಣದಲ್ಲಿ ಪ್ರಜ್ವಲ್ ಅವರನ್ನು  ಬಂಧಿಸಿದ ನಂತರ ಹೆಚ್​ ಡಿ ರೇವಣ್ಣಗೆ ನೀಡಿದ್ದ ಹಾಸಿಗೆ ಮತ್ತು ದಿಂಬನ್ನು ಪ್ರಜ್ವಲ್​ಗೂ ನೀಡಲಾಗಿತ್ತು. ಆದರೆ ಹೊಸ ಜಾವಾದ್ದರಿಂದ ಪ್ರಜ್ವಲ್​ ರಾತ್ರಿಯಿಡೀ ಸರಿಯಾಗಿ ನಿದ್ದೆ ಮಾಡದೇ, ಯೋಚಿಸುತ್ತಾ  ಮೌನವಾಗಿ ಕುಳಿತಿದ್ದರು ಎನ್ನಲಾಗಿದೆ.

14 ದಿನಗಳ ರಿಮ್ಯಾಂಡ್ ಕೋರಿ ಎಸ್ ಐಟಿ ಪರ ವಕೀಲರು ಅರ್ಜಿ ಸಲ್ಲಿಸಿದ್ದರು.  ವಿಚಾರಣೆ ವೇಳೆ ನ್ಯಾಯಾಧೀಶರು, ಎಸ್ ​ಐಟಿ ವಶದಲ್ಲಿ ಏನಾದರೂ ಟಾರ್ಚರ್ ಕೊಡಲಾಗಿದಿಯೇ ಎಂದು ಪ್ರಶ್ನಿಸಿದರು.

ತನಗೆ ನೀಡಲಾಗಿರುವ ರೂಮ್ ತುಂಬಾ ವಾಸನೆ ಬರುತ್ತಿದೆ, ಉಸಿರಾಟಕ್ಕೆ ತೊಂದರೆಯಾಗುತ್ತಿದೆ. ಅಷ್ಟು ಬಿಟ್ಟರೆ, ಬೇರೇನೂ ಟಾರ್ಚರ್ ಆಗಿಲ್ಲ ಎಂದು ನ್ಯಾಯಾಧೀಶರಿಗೆ ಪ್ರಜ್ವಲ್ ತಿಳಿಸಿದ್ದಾರೆ ಎನ್ನಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಫೇಸ್ ಬುಕ್ ಪೇಜ್ ಫಾಲೋ ಮಾಡಿ: https://www.facebook.com/profile.php?id=61556202767068

ಇತ್ತೀಚಿನ ಸುದ್ದಿ