ಪ್ರಜ್ವಲ್ ರೇವಣ್ಣ 6 ದಿನಗಳ ಕಾಲ ಎಸ್ ಐಟಿ ಕಸ್ಟಡಿಗೆ: ತನಿಖೆಗೆ ಹಾಸನಕ್ಕೆ ಕರೆದೊಯ್ಯುವ ಸಾಧ್ಯತೆ! - Mahanayaka

ಪ್ರಜ್ವಲ್ ರೇವಣ್ಣ 6 ದಿನಗಳ ಕಾಲ ಎಸ್ ಐಟಿ ಕಸ್ಟಡಿಗೆ: ತನಿಖೆಗೆ ಹಾಸನಕ್ಕೆ ಕರೆದೊಯ್ಯುವ ಸಾಧ್ಯತೆ!

prajwal revanna case
31/05/2024

ಬೆಂಗಳೂರು:   ಹಾಸನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ  ಎಸ್ ಐಟಿ ಇಂದು ಬೆಂಗಳೂರಿನ ನ್ಯಾಯಾಲಯದ ಮುಂದೆ ಇಂದು ಪ್ರಜ್ವಲ್ ರೇವಣ್ಣ ಅವರನ್ನು ಹಾಜರುಪಡಿಸಿತ್ತು. ನ್ಯಾಯಾಲಯವು ಹೆಚ್ಚಿನ ವಿಚಾರಣೆಗಾಗಿ  6 ದಿನಗಳ ಕಾಲ ಪ್ರಜ್ವಲ್ ಅವರನ್ನು ಎಸ್ ಐಟಿ ವಶಕ್ಕೆ ನೀಡಿ ಆದೇಶಿಸಿದೆ.


Provided by

ಗುರುವಾರ ರಾತ್ರಿ ಬಂಧನಕ್ಕೆ ಒಳಗಾಗಿದ್ದ ಪ್ರಜ್ವಲ್‌ ರೇವಣ್ಣ ಅವರನ್ನು ಎಸ್‌ ಐಟಿ ಅಧಿಕಾರಿಗಳ ತಂಡ ಭಾರೀ ಭದ್ರತೆಯೊಂದಿಗೆ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯ ದ ಮುಂದೆ ಹಾಜರಿಪಡಿಸಿತು. ಮಧ್ಯಾಹ್ನವೇ ಪ್ರಕರಣದ ವಿಚಾರಣೆ ಆರಂಭವಾಗಬೇಕಿತ್ತು. ಕೇಸಿನ ಡೈರಿ ಇಲ್ಲದೇ ಇದ್ದುದರಿಂದ ಎಸ್‌ಐಟಿ ಸಮಯ ಕೇಳಿತ್ತು. ಇದರಿಂದ ಮಧ್ಯಾಹ್ನ 3ಕ್ಕೆ ವಿಚಾರಣೆ ಮುಂದೂಡಲಾಗಿತ್ತು.

ಈ ವೇಳೆ ಸರ್ಕಾರಿ ಅಭಿಯೋಜಕ ಅಶೋಕ್‌ ನಾಯಕ್‌ ಅವರು ಪ್ರಜ್ವಲ್‌ ರೇವಣ್ಣ ಅವರ ವಿರುದ್ದ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಅಲ್ಲದೇ ಅತ್ಯಾಚಾರ ಪ್ರಕರಣಗಳು ಕೂಡ ದಾಖಲಾಗಿವೆ. ಗಂಭೀರ ಸ್ವರೂಪದ ಆರೋಪಗಳ ಪ್ರಕರಣವಾಗಿರುವುದರಿಂದ ಅವರನ್ನು ಹದಿನೈದು ದಿನಗಳ ಮಟ್ಟಿಗೆ ಎಸ್‌ಐಟಿ ವಶಕ್ಕೆ ನೀಡಬೇಕು ಎಂದು ಕೋರಿದರು.


Provided by

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರಜ್ವಲ್‌ ರೇವಣ್ಣ ಪರ ವಕೀಲ ಅರುಣ್‌, ಇಡೀ ಪ್ರಕರಣದಲ್ಲಿ ಹಲವಾರು ಅನುಮಾನಗಳಿಗೆ. ಇದು ನಾಲ್ಕು ವರ್ಷದ ಹಿಂದೆ ನಡೆದ ಪ್ರಕರಣ ಎಂದು ತಿಳಿಸಲಾಗಿದೆ. ಆದರೆ ಅತ್ಯಾಚಾರದ ಅವಧಿಯ ಉಲ್ಲೇಖವಿಲ್ಲ. ಬರೀ ಅತ್ಯಾಚಾರ ಪ್ರಕರಣ ಎಂದು ದಾಖಲಿಸಲಾಗಿದೆ. ಅಲ್ಲದೇ ವಿಡಿಯೋದಲ್ಲಿರುವ ಮುಖವನ್ನು ಆಧರಿಸಿ ಎಸ್‌ಐಟಿ ತನಿಖೆ ನಡೆಸುತ್ತಿದೆ. ಅಲ್ಲದೇ ದೌರ್ಜನ್ಯ ಪ್ರಕರಣವನ್ನೇ ಅತ್ಯಾಚಾರ ಪ್ರಕರಣವಾಗಿ ಬದಲಾಯಿಸಲಾಗಿದೆ. ಈ ಪ್ರಕರಣದಲ್ಲಿ ನಮ್ಮ ಕಕ್ಷಿದಾರರಿಗೆ ಒಂದು ದಿನದ ಕಸ್ಟಡಿ ಕೊಟ್ಟರೆ ಸಾಕು ಎಂದು ವಾದಿಸಿದರು.

ಎರಡೂ ಕಡೆಯ ವಾದ ವಿವಾದವನ್ನು ಆಲಿಸಿದ ನ್ಯಾಯಾಧೀಶ ಶಿವಕುಮಾರ್‌ ಅವರು ಮಧ್ಯಾಹ್ನಕ್ಕೆ ತೀರ್ಪು ಕಾಯ್ದಿರಿಸಿದ್ದರು. ಪ್ರಜ್ವಲ್‌ ಅವರನ್ನು ಕಸ್ಟಡಿಗೆ ನೀಡುತ್ತಾರೋ ಅಥವಾ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬಹುದಾ ಎನ್ನುವ ಕುತೂಹಲವಿತ್ತು. ಮತ್ತೆ ನ್ಯಾಯಾಲಯ ಸೇರಿದಾಗ ನ್ಯಾಯಾಧೀಶರು ಪ್ರಜ್ವಲ್‌ ರೇವಣ್ಣ ಅವರನ್ನು ಆರು ದಿನಗಳ ಮಟ್ಟಿಗೆ ಎಸ್‌ ಐಟಿ ಕಸ್ಟಡಿಗೆ ನೀಡಲು ಸೂಚಿಸಿದರು.

ಶುಕ್ರವಾರದಿಂದ ಪ್ರಜ್ವಲ್ ರೇವಣ್ಣ ಅವರ ವಿಚಾರಣೆ ಮುಂದುವರಿಯಲಿದೆ. ಹಾಸನ, ಹೊಳೆನರಸೀಪುರ, ಬೆಂಗಳೂರಿನಲ್ಲಿ ನಡೆದ ವಿಡಿಯೋ ಚಿತ್ರೀಕರಣ, ಅತ್ಯಾಚಾರ ದೂರಿನ ಕುರಿತು ಸ್ಥಳ ಮಹಜರು ಕೂಡ ಮಾಡಲಾಗುತ್ತದೆ. ಇದಕ್ಕಾಗಿ ಎರಡು ದಿನಗಳ ಒಳಗೆ ಪ್ರಜ್ವಲ್‌ ಅವರನ್ನು ಸ್ಥಳಗಳಿಗೆ ಕರೆದೊಯ್ಯವ ಸಾಧ್ಯತೆಯಿದೆ.

ಇಡೀ ಪ್ರಕರಣದ ಕುರಿತು ಮಾಹಿತಿಯನ್ನು ಸಂಗ್ರಹಿಸಲು ಎಸ್‌ ಐಟಿ ಪ್ರಜ್ವಲ್‌ ಅವರಿಂದ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಿದೆ. ಆನಂತರ ಮತ್ತೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದು, ಅಗತ್ಯ ಬಿದ್ದರೆ ಕಸ್ಟಡಿಗೆ ಪಡೆಯಬಹುದು. ಇಲ್ಲದೇ ಇದ್ದರೆ ನ್ಯಾಯಾಂಗ ಬಂಧನವೋ ಅಥವಾ ಜಾಮೀನು ಸಿಗಬಹುದೋ ಎನ್ನುವುದು ನಿರ್ಧಾರವಾಗಬಹುದು ಎನ್ನಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಫೇಸ್ ಬುಕ್ ಪೇಜ್ ಫಾಲೋ ಮಾಡಿ: https://www.facebook.com/profile.php?id=61556202767068

ಇತ್ತೀಚಿನ ಸುದ್ದಿ