ಪ್ರಾಣ ಸ್ನೇಹಿತರು ಜೊತೆಯಾಗಿ ಪ್ರಾಣ ಬಿಟ್ಟರು: ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದು ಪ್ರಾಣಕ್ಕೆ ಕುತ್ತು ತಂದಿತು! - Mahanayaka

ಪ್ರಾಣ ಸ್ನೇಹಿತರು ಜೊತೆಯಾಗಿ ಪ್ರಾಣ ಬಿಟ್ಟರು: ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದು ಪ್ರಾಣಕ್ಕೆ ಕುತ್ತು ತಂದಿತು!

lalith haricharan
13/09/2021

ಚಿಕ್ಕಬಳ್ಳಾಪುರ: ಕೃಷಿಹೊಂಡದಲ್ಲಿ ಮುಳುಗಿ ಇಬ್ಬರು ಬಾಲಕರು ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಾಟದಹೊಸಹಳ್ಳಿ ಬಳಿಯ ಹಳೆಯ ಊರು ಗ್ರಾಮದಲ್ಲಿ ನಡೆದಿದ್ದು, ಮೃತ ಬಾಲಕರಿಬ್ಬರಿಗೂ ಈಜು ಬಾರದ ಕಾರಣ ಅವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.


Provided by

14 ವರ್ಷ ವಯಸ್ಸಿನ ಲಲಿತ್ ಹಾಗೂ 13 ವರ್ಷ ವಯಸ್ಸಿನ ಹರಿಚರಣ್ ಮೃತ ಬಾಲಕರು ಎಂದು ಗುರುತಿಸಲಾಗಿದೆ. ನಿನ್ನೆ ಮಧ್ಯಾಹ್ನ 3 ಗಂಟೆಗೆ ಈಜಾಡಲು ಗ್ರಾಮದ ಹೊರವಲಯದ ಜಯಣ್ಣ ಎಂಬವರಿಗೆ ಸೇರಿದ ಕೃಷಿ ಹೊಂಡಕ್ಕೆ ಇವರಿಬ್ಬರು ತೆರಳಿದ್ದು, ಈಜುತ್ತಿದ್ದ ವೇಳೆ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ.

ಸಂಜೆಯಾದರೂ ಬಾಲಕರು ಮನೆಗೆ ಬಾರದೇ ಇದ್ದ ಕಾರಣ ಪೋಷಕರು ಹುಡುಕಲು ಆರಂಭಿಸಿದ್ದಾರೆ. ಈ ವೇಳೆ ಕೃಷಿ ಹೊಂಡದಲ್ಲಿ ಬಾಲಕರ ಮೃತದೇಹಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ. ಈ ವೇಳೆ ಗ್ರಾಮಸ್ಥರೇ ಬಾಲಕರ ಮೃತದೇಹವನ್ನು ಕೃಷಿ ಹೊಂಡದಿಂದ ಮೇಲೆತ್ತಿದ್ದಾರೆ.


Provided by

ಈ ಘಟನೆಯ ಬಗ್ಗೆ ಮಾಹಿತಿ ಪಡೆದ ಗೌರಿಬಿದನೂರು ಸಿಪಿಐ ಶಶಿಧರ್ ಹಾಗೂ ಗ್ರಾಮಾಂತರ ಠಾಣಾ ಪಿಎಸ್ ಐ ವಿಜಯ್ ಕಾನೂನು ಕ್ರಮಗಳ ಬಗ್ಗೆ ಪೋಷಕರಿಗೆ ಅರಿವು ನೀಡಿದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಇನ್ನೂ ಬಾಲಕರಿಬ್ಬರು ಅಕ್ಕಪಕ್ಕದ ಮನೆಯವರಾಗಿದ್ದು, ಪ್ರಾಣ ಸ್ನೇಹಿತರಾಗಿದ್ದರು. ಇದೀಗ ಸಾವಿನಲ್ಲಿಯೂ ಜೊತೆಯಾಗಿದ್ದಾರೆ.

ಇನ್ನಷ್ಟು ಸುದ್ದಿಗಳು…

ಜಾತಿ ಜನಗಣತಿ ಸಮೀಕ್ಷೆಯನ್ನು ಕೊಂದದ್ದು ಸಿದ್ದರಾಮಯ್ಯ, ಹೂತದ್ದು ಡಿ.ಕೆ.ಶಿವಕುಮಾರ್ | ಕೆ.ಎಸ್.ಈಶ್ವರಪ್ಪ

ವಿಧಾನಸೌಧಕ್ಕೆ ಎತ್ತಿನಗಾಡಿಯಲ್ಲಿ ಬಂದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್

ಅಡಿಕೆ ಬೇಯಿಸುವ ಹಂಡೆಗೆ ಬಿದ್ದು ನಾಲ್ಕು ವರ್ಷ ವಯಸ್ಸಿನ ಬಾಲಕನ ದಾರುಣ ಸಾವು!

ಮಹಿಳೆಯನ್ನು ಬೆತ್ತಲೆಗೊಳಿಸಿ ಥಳಿಸಿ, ಅಂಗಾಂಗ ಮುಟ್ಟಿ ವಿಕೃತವಾಗಿ ಥಳಿಸಿದ ತಂಡ: ವಿಡಿಯೋ ವೈರಲ್

ಸಂಸದ ಪ್ರತಾಪ್ ಸಿಂಹ ಅವರ ಕಚೇರಿ ಮುಂದೆ ಬಳೆ ಇಟ್ಟು, ಯುವ ಕಾಂಗ್ರೆಸ್ ನಿಂದ ಪ್ರತಿಭಟನೆ

ಮುಂಬೈ: ಸ್ನೇಹಿತರೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ!

ಕೇವಲ ಐದು ರೂಪಾಯಿಗಾಗಿ ಬುಡಕಟ್ಟು ಸಮುದಾಯದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ!

ರಸ್ತೆಯಲ್ಲಿ ಮಹಿಳೆಯ ಕೈ ಹಿಡಿದೆಳೆದ ಜೆಡಿಎಸ್ ಮುಖಂಡ!

ಇತ್ತೀಚಿನ ಸುದ್ದಿ