ಪ್ರಶಾಂತ್ ನೀಲ್ ಭಾರತೀಯ ಸಿನಿಮಾ ರಂಗದ ವೀರಪ್ಪನ್: ರಾಮ್ ಗೋಪಾಲ್ ವರ್ಮಾ - Mahanayaka

ಪ್ರಶಾಂತ್ ನೀಲ್ ಭಾರತೀಯ ಸಿನಿಮಾ ರಂಗದ ವೀರಪ್ಪನ್: ರಾಮ್ ಗೋಪಾಲ್ ವರ್ಮಾ

ramgopal varma
05/05/2022


Provided by

ನಿರ್ದೇಶಕರ ದಿನದಂದೇ ಕೆಜಿಎಫ್ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿಭಿನ್ನವಾಗಿ ವಿಶ್ ಮಾಡಿ ಟ್ವೀಟ್ ಮಾಡಿದ್ದು, ಇದೀಗ ತೀವ್ರ ಚರ್ಚೆಗಳನ್ನು ಹುಟ್ಟು ಹಾಕಿದೆ.

ಪ್ರಶಾಂತ್ ನೀಲ್ ಅವರನ್ನು ಭಾರತೀಯ ಸಿನಿಮಾ ರಂಗದ ವೀರಪ್ಪನ್ ಎಂದು ಕರೆದಿರುವ ರಾಮ್ ಗೋಪಾಲ್ ವರ್ಮಾ, ಪ್ರಶಾಂತ್ ನೀಲ್ ಅವರಿಂದಾಗಿ ಭಾರತೀಯ ಚಿತ್ರರಂಗಕ್ಕೆ ನೂರಾರು ಕೋಟಿ ನಷ್ಟವಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ನಿರ್ದೇಶಕರ ದಿನದಂದು ವರ್ಮಾ ಪ್ರಶಾಂತ್ ನೀಲ್ ಅವರನ್ನು ಹೊಗಳಿ ವಿಶ್ ಮಾಡಿದ್ರಾ ಇಲ್ಲ, ತೆಗಳಿ ವಿಶ್ ಮಾಡಿದ್ರಾ ಅನ್ನೋ ಅನುಮಾನ ಮೂಡುವಂತ ಟ್ವೀಟ್ ನ್ನು ರಾಮ್ ಗೋಪಾಲ್ ವರ್ಮಾ ಮಾಡಿದ್ದಾರೆ. ಸದಾ ಒಂದಲ್ಲ ಒಂದು ವಿವಾದಗಳನ್ನು ಮೈ ಮೇಲೆ ಎಳೆದುಕೊಳ್ಳುವುದು ರಾಮ್ ಗೋಪಾಲ್ ವರ್ಮಾ ಅವರಿಗೆ ಹೊಸದಲ್ಲ. ಅವುಗಳ ನಡುವೆಯೇ ಇದೀಗ ಪ್ರಶಾಂತ್ ನೀಲ್ ಅವರಿಗೆ ವಿಚಿತ್ರವಾಗಿ ವಿಶ್ ಮಾಡಿ ಅವರು ಭಾರತೀಯ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ್ದಾರೆ.

ಸ್ಯಾಂಡಲ್ ವುಡ್, ಬಾಲಿವುಡ್, ಕಾಲಿವುಡ್, ಟಾಲಿವುಡ್ ಎಲ್ಲ ನಿರ್ದೇಶಕರ ತಲೆಕೆಡಿಸಿದ್ದಕ್ಕಾಗಿ ನೀಲ್ ಅವರಿಗೆ ಅನ್ ಹ್ಯಾಪಿ ಡೈರೆಕ್ಟರ್ಸ್ ಡೇ, ನೀವು ಭಾರತೀಯ ಸಿನಿಮಾದ ವೀರಪ್ಪನ್. ಇದರಿಂದಾಗಿ ಬೇರೆ ಸಿನಿಮಾಗಳ ನಿರ್ಮಾಪಕರುಗಳು ಟನ್ ಗಟ್ಟಲೆ ಹಣ ನಷ್ಟ ಮಾಡಿಕೊಳ್ಳಲಿದ್ದಾರೆ ಎಂದು ಪ್ರಶಾಂತ್ ನೀಲ್ ಅವರಿಗೆ ವಿಶ್ ಮಾಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮತ್ತೊಮ್ಮೆ ಪ್ರಶಸ್ತಿ ಪಡೆದ “ಜೈ ಭೀಮ್” ಚಿತ್ರ: ಒಂದೇ ಸಮಾರಂಭದಲ್ಲಿ 2 ಪ್ರಶಸ್ತಿ!

ಇಂದಿಗೆ ಹೆಚ್ಚು ಪ್ರಸ್ತುತವಾಗಿರುವ ಮಹಾರ್ ಸಮುದಾಯವನ್ನುದ್ದೇಶಿಸಿ ಅಂಬೇಡ್ಕರರು ಹೇಳಿದ ಆ ಮಾತುಗಳು!

“ಬಿಎಸ್ ಪಿಯನ್ನು ಮಾಯಾವತಿ ಬಿಜೆಪಿಗೆ ಮಾರಾಟ ಮಾಡಿದ್ದಾರೆ”

ದಲಿತರ ಹಕ್ಕುಗಳನ್ನು ರಕ್ಷಿಸುವವರಾರು ?

ಪಿಎಸ್ ಐ ಹಗರಣ:  ಅಶ್ವಥ್ ನಾರಾಯಣ ಸಂಬಂಧಿಕನಿಗೆ 5ನೇ ರ‍್ಯಾಂಕ್!

ಇತ್ತೀಚಿನ ಸುದ್ದಿ