“ಬಿಎಸ್ ಪಿಯನ್ನು ಮಾಯಾವತಿ ಬಿಜೆಪಿಗೆ ಮಾರಾಟ ಮಾಡಿದ್ದಾರೆ” - Mahanayaka

“ಬಿಎಸ್ ಪಿಯನ್ನು ಮಾಯಾವತಿ ಬಿಜೆಪಿಗೆ ಮಾರಾಟ ಮಾಡಿದ್ದಾರೆ”

mayawati
04/05/2022

ಜಾರ್ಖಂಡ್: ಬಹುಜನ ಸಮಾಜ ಪಾರ್ಟಿ(ಬಿಎಸ್ ಪಿ)ಯನ್ನು ಬಿಜೆಪಿ ಪಕ್ಷಕ್ಕೆ ಮಾರಾಟ ಮಾಡಲಾಗಿದೆ ಎಂದು ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಗಂಭೀರವಾದ ಆರೋಪ ಮಾಡಿದ್ದಾರೆ.

ಜಾರ್ಖಂಡ್ ನ ಗರ್ವಾ ಜಿಲ್ಲೆಯಲ್ಲಿ  ಮಾಧ್ಯಮಗಳೊಂದಿಗೆ ಮಾತನಾಡಿದ ಆಜಾದ್, ಮಾಯಾವತಿಯವರು ಬಿಎಸ್ ಪಿಯನ್ನು ಬಿಜೆಪಿಗೆ ಮಾರಾಟ ಮಾಡಿದ್ದಾರೆ. ಅವರು ಮಾಡುತ್ತಿರುವ ಕಾರ್ಯ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆದರ್ಶಗಳಿಗೆ ತೀವ್ರ ಹಾನಿಯನ್ನುಂಟು ಮಾಡಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ತನ್ನನ್ನು ಹಾಗೂ ಸಹೋದರ ಸಂಬಂಧಿಕರನ್ನು ರಕ್ಷಿಸಿಕೊಳ್ಳಲು ಮಾಯಾವತಿ, ಬಿಜೆಪಿಯ ಮುಂದೆ ಶರಣಾಗಿದ್ದಾರೆ. ಇದರಿಂದ ದಲಿತರಿಗೆ ದ್ರೋಹವಾಗಿದೆ. ಇದನ್ನು ನಾವು ಸಹಿಸುವುದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ದಲಿತರ ಹಕ್ಕುಗಳನ್ನು ರಕ್ಷಿಸುವವರಾರು ?

ಪಿಎಸ್ ಐ ಹಗರಣ:  ಅಶ್ವಥ್ ನಾರಾಯಣ ಸಂಬಂಧಿಕನಿಗೆ 5ನೇ ರ‍್ಯಾಂಕ್!

ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಎಸೆಸೆಲ್ಸಿ ವಿದ್ಯಾರ್ಥಿನಿ!

ಟಿಪ್ಪರ್ ಲಾರಿ, ಬೈಕ್ ನಡುವೆ ಅಪಘಾತ: ಓರ್ವ ಯುವಕ ಸಾವು,  ಮತ್ತೋರ್ವ ಗಂಭೀರ

ಭೀಕರ ಅಪಘಾತಕ್ಕೆ ಮಗು ಸೇರಿದಂತೆ ಒಂದೇ ಕುಟುಂಬದ ಮೂವರು ಬಲಿ

ಇತ್ತೀಚಿನ ಸುದ್ದಿ