ಪ್ರಿಯಕರನ ಜೊತೆಗೆ ಸೇರಿಕೊಂಡು ಪತಿಯ ಭೀಕರ ಹತ್ಯೆ | ಕೊನೆಗೂ ಬಯಲಾಯ್ತು ಪತ್ನಿಯ ಕೃತ್ಯ - Mahanayaka

ಪ್ರಿಯಕರನ ಜೊತೆಗೆ ಸೇರಿಕೊಂಡು ಪತಿಯ ಭೀಕರ ಹತ್ಯೆ | ಕೊನೆಗೂ ಬಯಲಾಯ್ತು ಪತ್ನಿಯ ಕೃತ್ಯ

11/01/2021

ನೆಲಮಂಗಲ: ಪ್ರಿಯಕರನ ಜೊತೆ ಸೇರಿಕೊಂಡು ಪತಿಯ ಹತ್ಯೆ ಮಾಡಿದ್ದ ಪತ್ನಿ ಹಾಗೂ ಪ್ರಿಯಕರನನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದು, ಮೃತನ ತಾಯಿ ನೀಡಿದ ದೂರನ್ನು ಆದರಿಸಿ ತನಿಖೆ ನಡೆಸಿದ ವೇಳೆ ಆರೋಪಿಗಳ ಕೃತ್ಯ ಬೆಳಕಿಗೆ ಬಂದಿದೆ.

ಶಿವಲಿಂಗಯ್ಯ (46) ಹತ್ಯೆಗೀಡಾದ ವ್ಯಕ್ತಿಯಾಗಿದ್ದಾರೆ. ಪತ್ನಿ ಶೋಭಾ(44) ಹಾಗೂ ಕೆಲಸದಾಳು, ಶೋಭಾಳ ಪ್ರಿಯಕರ ರಾಮ(45) ಹತ್ಯೆ ಆರೋಪಿಗಳಾಗಿದ್ದಾರೆ. ಜೂನ್ 1, 2020ರಂದು ಬೆಂಗಳೂರು ಉತ್ತರ ತಾಲೂಕಿನ ತೋಟದಗುಡ್ಡದ ಬಳಿ ಈ ಭೀಕರ ಕೊಲೆಯಾಗಿತ್ತು.

ಮದ್ಯದ ನಶೆಯಲ್ಲಿ ಆರಂಭವಾಗಿದ್ದ ಗಲಾಟೆಯ ಸಂದರ್ಭದಲ್ಲಿ ಕೆಲಸದಾಳು ರಾಮನ ಜೊತೆಗೆ ಸೇರಿಕೊಂಡು ಶಿವಲಿಂಗಯ್ಯ ಅವರನ್ನು ಪತ್ನಿಯೇ ಹತ್ಯೆ ನಡೆಸಿದ್ದು, ಬಳಿಕ ಯಾರಿಗೂ ತಿಳಿಯದಂತೆ ಕಸದ  ರಾಶಿಯಲ್ಲಿ ಮೃತದೇಹವನ್ನು ಮುಚ್ಚಿಡಲಾಗಿತ್ತು.

ಮೃತ ಶಿವಲಿಂಗಯ್ಯ ಅವರ ತಮ್ಮ ಪುಟ್ಟರಾಜು ನವೆಂಬರ್ 12-2020ರಂದು ದೂರು ನೀಡಿದ್ದರು. ಶೋಭಾಗೆ ಅನೈತಿಕ ಸಂಬಂಧವಿದ್ದು, ಆಕೆಯೇ ಹತ್ಯೆ ಮಾಡಿಸಿದ್ದಾಳೆ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಇದೀಗ ಪೋಷಕರ ಅನುಮಾನ ನಿಜವಾಗಿದ್ದು, ಶೋಭಾಳ  ಕೃತ್ಯ ಬೆಳಕಿಗೆ ಬಂದಿದೆ.

ಇತ್ತೀಚಿನ ಸುದ್ದಿ