ಪಿಯುಸಿ ಪರೀಕ್ಷೆ: 97% ಅಂಕ ಗಳಿಸಿ ಮಲೆನಾಡಿಗೆ ಕೀರ್ತಿ ತಂದ ಗಬ್ಗಲ್‌ ನ ಹೆನಿನ್ ಸ್ವೀಡಲ್ ಪಾಯ್ಸ್ - Mahanayaka

ಪಿಯುಸಿ ಪರೀಕ್ಷೆ: 97% ಅಂಕ ಗಳಿಸಿ ಮಲೆನಾಡಿಗೆ ಕೀರ್ತಿ ತಂದ ಗಬ್ಗಲ್‌ ನ ಹೆನಿನ್ ಸ್ವೀಡಲ್ ಪಾಯ್ಸ್

henin swedal ​​poise
14/04/2026

ಕೊಟ್ಟಿಗೆಹಾರ: ಇತ್ತೀಚೆಗೆ ಪ್ರಕಟವಾದ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಗಬ್ಗಲ್ ಗ್ರಾಮದ ಹೆನಿನ್ ಸ್ವೀಡಲ್ ಪಾಯ್ಸ್ ಶೇ. 97ರಷ್ಟು ಅಂಕಗಳನ್ನು ಗಳಿಸುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಮಂಗಳೂರಿನ ಪ್ರತಿಷ್ಠಿತ ಸೇಂಟ್ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿನಿಯಾದ ಹೆನಿನ್, ಒಟ್ಟು 579 ಅಂಕಗಳನ್ನು ಪಡೆಯುವ ಮೂಲಕ ಮಲೆನಾಡಿನ ಹೆಮ್ಮೆಯ ಸಾಧಕಿಯಾಗಿ ಹೊರಹೊಮ್ಮಿದ್ದಾರೆ. ಇವರು ಗಬ್ಗಲ್ ನಿವಾಸಿಗಳಾದ ಹೆರಾಲ್ಡ್ ಪಾಯ್ಸ್ ಹಾಗೂ ಶಾಂತಿ ಪಾಯ್ಸ್ ದಂಪತಿಯ ಪುತ್ರಿ.

ಗ್ರಾಮೀಣ ಭಾಗದ ಪ್ರತಿಭೆಯೊಬ್ಬರು ರಾಜ್ಯ ಮಟ್ಟದ ಗಮನ ಸೆಳೆಯುವಂತಹ ಸಾಧನೆ ಮಾಡಿರುವುದು ಗಬ್ಗಲ್ ಗ್ರಾಮಸ್ಥರಲ್ಲಿ ಸಂಭ್ರಮ ತಂದಿದೆ. ಹೆನಿನ್ ಅವರ ಈ ಯಶಸ್ಸಿಗೆ ಪೋಷಕರು, ಶಿಕ್ಷಕರು ಹಾಗೂ ಗಣ್ಯರು ಹರ್ಷ ವ್ಯಕ್ತಪಡಿಸಿ, ಮುಂದಿನ ಉನ್ನತ ವ್ಯಾಸಂಗಕ್ಕೆ ಶುಭ ಹಾರೈಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ