ಭಾರತ್ ಜೋಡೋ ಸಕ್ಸಸ್ ಗೆ ಈ ದೇವರು ಕಾರಣ ಅಂದ್ರು ರಾಹುಲ್ ಗಾಂಧಿ - Mahanayaka

ಭಾರತ್ ಜೋಡೋ ಸಕ್ಸಸ್ ಗೆ ಈ ದೇವರು ಕಾರಣ ಅಂದ್ರು ರಾಹುಲ್ ಗಾಂಧಿ

bharath jodo
14/10/2022

ಬೆಂಗಳೂರು:  ಬಿಜೆಪಿ ನಾಯಕರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಪದೇ ಪದೇ ನಾಸ್ತಿಕ ಎಂಬಂತೆ ಬಿಂಬಿಸುತ್ತಿದ್ದಾರೆ. ಈ ನಡುವೆ ಕರ್ನಾಟಕದೆಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿರುವ ರಾಹುಲ್ ಗಾಂಧಿ, ತಮ್ಮ ಆಧ್ಯಾತ್ಮಿಕ ನಂಬಿಕೆಯ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ ಅವರಿಗೆ  ಭಾರತ್ ಜೋಡೋ ಯಾತ್ರೆ ಆರಂಭಕ್ಕೆ ನಿಮಗೆ ಎಲ್ಲಿಂದ ಶಕ್ತಿ ಬಂತು ಎಂದು ಪತ್ರಕರ್ತರು ಪ್ರಶ್ನಿಸಿದಾಗ ಅದಕ್ಕೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ನಾನು ಒಂದೇ ವರ್ಡ್ ನಲ್ಲಿ ಹೇಳುತ್ತೇನೆ ಅನ್ನುತ್ತಾ, ಶಿವ, ಶಿವ. ನನ್ನ ಶಕ್ತಿ ಅಂದ್ರು.

ನಿಮಗೆ ಆಧ್ಯಾತ್ಮದಲ್ಲಿ ನಂಬಿಕೆ ಇದೆಯೇ ಎಂದು ಪತ್ರಕರ್ತರು ಮರುಪ್ರಶ್ನೆ ಹಾಕಿದ್ದು, ಈ ವೇಳೆ ಆಧ್ಯಾತ್ಮ, ಧಾರ್ಮಿಕತೆ ಬಗ್ಗೆ ಬೇರೆ ಬೇರೆ ವ್ಯಾಖ್ಯಾನಗಳನ್ನು ಕೊಡುತ್ತಾರೆ. ಆ ಬಗ್ಗೆ ನನಗೆ ಆಸಕ್ತಿ ಇಲ್ಲ. ಆದರೆ ಶಿವನನ್ನು ನಾನು ನಂಬುತ್ತೇನೆ ಎಂದು ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ