ದೇವೀರಮ್ಮನ ಗುಡ್ಡದ ತಪ್ಪಲಿನಲ್ಲಿ ಮಳೆ: ಭಕ್ತರಿಗೆ ಬೇಸರ - Mahanayaka

ದೇವೀರಮ್ಮನ ಗುಡ್ಡದ ತಪ್ಪಲಿನಲ್ಲಿ ಮಳೆ: ಭಕ್ತರಿಗೆ ಬೇಸರ

deeviramma
30/10/2024

ಚಿಕ್ಕಮಗಳೂರು :  ದೇವೀರಮ್ಮನ ಗುಡ್ಡದ ತಪ್ಪಲಿನಲ್ಲಿ ಸಂಜೆಯಿಂದಲೂ ಮಳೆ ಆರಂಭಗೊಂಡಿದೆ. ಹೀಗಾಗಿ  ಇಂದು ಸಂಜೆಯಿಂದ ನಾಳೆ ಮಧ್ಯಾಹ್ನದವರೆಗೂ ಬೆಟ್ಟ ಹತ್ತುತ್ತಿರುವ ಭಕ್ತರಿಗೆ ಬೇಸರ ಉಂಟಾಗಿದೆ.

3,000 ಅಡಿ ಎತ್ತರದ ಪಿರಮಿಡ್ ಆಕಾರದ ಗುಡ್ಡದಲ್ಲಿ  ದೇವೀರಮ್ಮ ನೆಲೆಸಿದ್ದು, ಪ್ರತಿ ವರ್ಷ ಲಕ್ಷಾಂತರ ಭಕ್ತರು ಬರಿಗಾಲಲ್ಲಿ ಹತ್ತಿ ದೇವಿ ದರ್ಶನ ಮಾಡುತ್ತಾರೆ.  ಈ ಬಾರಿಯೂ ಲಕ್ಷಕ್ಕೂ ಅಧಿಕ ಭಕ್ತರು ಬೆಟ್ಟ ಹತ್ತುವ ನಿರೀಕ್ಷೆ ಇತ್ತು.

ಸಂಜೆಯಿಂದಲೇ ನಿರಂತರ ಮಳೆಯಾಗುತ್ತಿದ್ದು ಭಕ್ತರಲ್ಲಿ ಬೇಸರ ತಂದಿದೆ. ಹೋದಂತ ಭಕ್ತರು ಗುಡ್ಡದಲ್ಲಿ ಹಗ್ಗ ಹಿಡಿದು ಬೆಟ್ಟ ಹತ್ತುತ್ತಿದ್ದಾರೆ.  ಭಕ್ತರ ಅನುಕೂಲಕ್ಕಾಗಿ ಜಿಲ್ಲಾಡಳಿತ, ದೇವಸ್ಥಾನ ಆಡಳಿತ ಮಂಡಳಿ  ಸಕಲ‌ಸಿದ್ಧತೆ ಮಾಡಿದೆ.

ಚಿಕ್ಕಮಗಳೂರು ನಗರ ಸೇರಿದಂತೆ  ಮಲೆನಾಡು ಭಾಗದಲ್ಲಿ ಸಂಜೆಯಿಂದಲೂ ಮಳೆ ಆರಂಭಗೊಂಡಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ