ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ ನಿವಾಸಕ್ಕೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು - Mahanayaka

ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ ನಿವಾಸಕ್ಕೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು

lanka
10/05/2022

ಆರ್ಥಿಕ ಬಿಕ್ಕಟ್ಟಿನ ನಡುವೆ ನಾಗರಿಕ ಕಲಹ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರಿಗೆ ರಾಜೀನಾಮೆ ನೀಡಿದ ಕೆಲವೇ ಗಂಟೆಗಳಲ್ಲಿ ವಾಯವ್ಯ ಪ್ರಾಂತ್ಯದ ಕುರುನೆಗಾಲ ನಗರದಲ್ಲಿರುವ ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರ ನಿವಾಸಕ್ಕೆ ಸೋಮವಾರ ಬೆಂಕಿ ಹಚ್ಚಲಾಗಿದೆ.

 ಶ್ರೀಲಂಕಾದ ಮೊರಟುವಾ ಮೇಯರ್ ಸಮನ್ ಲಾಲ್ ಫರ್ನಾಂಡೊ ಮತ್ತು ಸಂಸದರಾದ ಸನತ್ ನಿಶಾಂತ, ರಮೇಶ್ ಪತಿರಾನಾ, ಮಹಿಪಾಲ ಹೆರಾತ್, ತಿಸಾ ಕುಟ್ಟಿಯಾರಾಚ್ಚಿ ಮತ್ತು ನಿಮಲ್ ಲಾಂಜಾ ಅವರ ಅಧಿಕೃತ ನಿವಾಸಗಳಿಗೆ ಇಂದು ಬೆಳಿಗ್ಗೆ ಸರ್ಕಾರಿ ವಿರೋಧಿ ಪ್ರತಿಭಟನಾಕಾರರು ಬೆಂಕಿ ಹಚ್ಚಿದರು.

ಇಂಟರ್ ಯೂನಿವರ್ಸಿಟಿ ಸ್ಟೂಡೆಂಟ್ಸ್ ಫೆಡರೇಷನ್ (ಐಯುಎಸ್‌ ಎಫ್) ಸೇರಿದಂತೆ ಹೆಚ್ಚಿನ ಸಂಖ್ಯೆಯ ಪ್ರತಿಭಟನಾಕಾರರು ಬೀದಿಗಿಳಿದು ಶ್ರೀಲಂಕಾದ ಪೋಡುಜಾನಾ ಪೆರಮುನಾ ಸಂಸದರ ಮೇಲೆ ಹಲ್ಲೆ ನಡೆಸಿದರು. ಶ್ರೀಲಂಕಾದ ಕೆಲವು ಪೊಡುಜಾನಾ ಪೆರಮುನಾ (ಎಸ್‌ಎಲ್ಪಿಪಿ) ಕಚೇರಿಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಡೈಲಿ ಮಿರರ್ ವರದಿ ಮಾಡಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕಾಂಗ್ರೆಸ್ ನಾಯಕನ ಪುತ್ರನ ವಿರುದ್ಧ ಅತ್ಯಾಚಾರದ ಆರೋಪ: ಮತ್ತೌಷಧಿ ನೀಡಿ ಯುವತಿಯ ಅತ್ಯಾಚಾರ

ಸುಪ್ರಭಾತ ಅಭಿಯಾನ: ಖಡಕ್ ಎಚ್ಚರಿಕೆ ನೀಡಿದ ಸಚಿವ ಅರಗ ಜ್ಞಾನೇಂದ್ರ

ಡ್ರಾಮ ದಂಗಲ್: ಮೈಕ್ ತೆಗೆಸದಿದ್ದರೆ ಸರ್ಕಾರದ ವಿರುದ್ಧ ಕಾನೂನು ಹೋರಾಟ | ಮುತಾಲಿಕ್ ಘೋಷಣೆ

ಅಮಾನವೀಯ ಘಟನೆ: ಸ್ಮಶಾನ ಅಗೆದು ವಿಕಲಚೇತನ ಬಾಲಕಿಯ ಮೃತದೇಹದ ಮೇಲೆ  ಅತ್ಯಾಚಾರ

ಮಾನನಷ್ಟ ಮೊಕದ್ದಮೆ  ಹಾಕಲು ಡಿ.ಕೆ.ಶಿವಕುಮಾರ್ ಗೆ ಮಾನ ಇದೆಯೇ? | ಯತ್ನಾಳ್ ಪ್ರಶ್ನೆ

ಇತ್ತೀಚಿನ ಸುದ್ದಿ