ಬೆಳಗಾವಿ ಜಿಲ್ಲಾ ಸಹಕಾರಿ ಬ್ಯಾಂಕ್ ನಲ್ಲಿ (BDCC) 104 ಹುದ್ದೆಗಳ ನೇಮಕಾತಿ: SSLC, ಪದವೀಧರರಿಗೆ ಸುವರ್ಣಾವಕಾಶ!
ಬ್ಯಾಂಕ್ ಉದ್ಯೋಗದ ನಿರೀಕ್ಷೆಯಲ್ಲಿದ್ದ ಉದ್ಯೋಗಾಕಾಂಕ್ಷಿಗಳಿಗೆ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ (BDCC Bank) ಸಿಹಿ ಸುದ್ದಿ ನೀಡಿದೆ. ಖಾಲಿ ಇರುವ 104 ಹುದ್ದೆಗಳ ಭರ್ತಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ
- ದ್ವಿತೀಯ ದರ್ಜೆ ಗುಮಾಸ್ತರು (SDC): 83 ಹುದ್ದೆಗಳು
- ಸಿಪಾಯಿ (Peon): 20 ಹುದ್ದೆಗಳು
- ಬಂದೂಕುಧಾರಿ (Gunman): 01 ಹುದ್ದೆ
- ಒಟ್ಟು ಹುದ್ದೆಗಳು: 104
ಶೈಕ್ಷಣಿಕ ಅರ್ಹತೆ:
- ದ್ವಿತೀಯ ದರ್ಜೆ ಗುಮಾಸ್ತರು: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ (Degree) ಪೂರ್ಣಗೊಳಿಸಿರಬೇಕು.
- ಸಿಪಾಯಿ ಮತ್ತು ಬಂದೂಕುಧಾರಿ: SSLC / 10ನೇ ತರಗತಿ ಪಾಸಾಗಿದ್ದರೆ ಸಾಕು (ಬಂದೂಕುಧಾರಿ ಹುದ್ದೆಗೆ ಮಾಜಿ ಸೈನಿಕರು ಹಾಗೂ ಗನ್ ಲೈಸೆನ್ಸ್ ಹೊಂದಿರುವವರಿಗೆ ಆದ್ಯತೆ).
- ಭಾಷಾ ಜ್ಞಾನ: ಅಭ್ಯರ್ಥಿಗಳಿಗೆ ಕನ್ನಡ ಭಾಷೆಯನ್ನು ಓದಲು, ಬರೆಯಲು ಮತ್ತು ಮಾತನಾಡಲು ಕಡ್ಡಾಯವಾಗಿ ಬರಬೇಕು.
ವೇತನ ಶ್ರೇಣಿ
- ದ್ವಿತೀಯ ದರ್ಜೆ ಗುಮಾಸ್ತರು: ₹53,150 ರಿಂದ ₹1,15,150
- ಸಿಪಾಯಿ: ₹47,650 ರಿಂದ ₹1,05,650
- ಬಂದೂಕುಧಾರಿ: ₹42,650 ರಿಂದ ₹96,650
ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 35 ವರ್ಷ (SC/ST/Cat-1 ಅಭ್ಯರ್ಥಿಗಳಿಗೆ 5 ವರ್ಷ ಹಾಗೂ OBC ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ಇರಲಿದೆ)
ಅರ್ಜಿ ಶುಲ್ಕ (SC/ST/Cat–1) : ₹500
ಅರ್ಜಿ ಶುಲ್ಕ (ಇತರ ವರ್ಗ) : ₹1,000
ಪ್ರಮುಖ ದಿನಾಂಕಗಳು
- ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ: 27 ಜುಲೈ 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27 ಆಗಸ್ಟ್ 2026
- ಶುಲ್ಕ ಪಾವತಿಸಲು ಕೊನೆಯ ದಿನಾಂಕ: 27 ಆಗಸ್ಟ್ 2026
ಅಧಿಸೂಚನೆಯ ಲಿಂಕ್: https://virtualofficeerp.com/bgccb2026/Notification.pdf
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























