ಇಸ್ರೇಲ್ ಮೇಲೆ ಲೆಬನಾನ್ ನಿಂದ ರಾಕೆಟ್ ದಾಳಿ: ಐದು ಮಂದಿ ಸಾವು - Mahanayaka
8:14 PM Wednesday 6 - November 2024

ಇಸ್ರೇಲ್ ಮೇಲೆ ಲೆಬನಾನ್ ನಿಂದ ರಾಕೆಟ್ ದಾಳಿ: ಐದು ಮಂದಿ ಸಾವು

31/10/2024

ಲೆಬನಾನ್ ನಿಂದ ನಡೆದ ಭೀಕರ ರಾಕೆಟ್ ದಾಳಿಯಲ್ಲಿ ಉತ್ತರ ಇಸ್ರೇಲ್ ನಲ್ಲಿ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ. ಗಡಿ ಪಟ್ಟಣ ಮೆಟುಲಾ ಬಳಿಯ ಕೃಷಿ ಪ್ರದೇಶಕ್ಕೆ ರಾಕೆಟ್ ಗಳು ಅಪ್ಪಳಿಸಿದೆ ಎಂದು ಸ್ಥಳೀಯ ಅಧಿಕಾರಿಗಳು ದೃಢಪಡಿಸಿದ್ದಾರೆ.

ಚಾನೆಲ್ 12 ನ್ಯೂಸ್ ಪ್ರಕಾರ, ಬಲಿಯಾದವರಲ್ಲಿ ಓರ್ವ ಇಸ್ರೇಲಿ ಪ್ರಜೆ ಮತ್ತು ನಾಲ್ಕು ವಿದೇಶಿ ಪ್ರಜೆಗಳು ಸೇರಿದ್ದಾರೆ. ಅಸೋಸಿಯೇಟೆಡ್ ಪ್ರೆಸ್ ಮತ್ತು ದಿ ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದ ರಾಕೆಟ್ ದಾಳಿಯು ಇಸ್ರೇಲ್-ಲೆಬನಾನ್ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ