2 ದಿನದ ಹೆಣ್ಣು ಮಗುವಿನ ಮಾರಾಟ: ನಿವೃತ್ತ ನರ್ಸ್, ದಂಪತಿ ಸಹಿತ ಮೂವರ ಬಂಧನ - Mahanayaka

2 ದಿನದ ಹೆಣ್ಣು ಮಗುವಿನ ಮಾರಾಟ: ನಿವೃತ್ತ ನರ್ಸ್, ದಂಪತಿ ಸಹಿತ ಮೂವರ ಬಂಧನ

chikkamagaluru
29/05/2025

ಚಿಕ್ಕಮಗಳೂರು: 2 ದಿನದ ಮಗುವನ್ನ 1 ಲಕ್ಷ ರೂಪಾಯಿಗೆ ಮಾರಾಟ ಮಾಡಿ ದಂಪತಿ ಲಾಕ್ ಆಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಹರಾವರಿ ಗ್ರಾಮದಲ್ಲಿ ನಡೆದಿದೆ.

ರತ್ನ ಮತ್ತು ಸದಾನಂದ ದಂಪತಿ 2 ದಿನದ ಹೆಣ್ಣು ಮಗುವನ್ನು ಮಾರಾಟ ಮಾಡಿ ಪೊಲೀಸರ ಅತಿಥಿಯಾಗಿರುವ ದಂಪತಿಯಾಗಿದ್ದಾರೆ. ಮಗುವಿನ ಮಾರಾಟಕ್ಕೆ ಸಹಕರಿಸಿದ್ದ ನಿವೃತ್ತ ನರ್ಸ್ ಕುಸುಮಾ ಕೂಡ ಬಂಧನಕ್ಕೊಳಗಾಗಿದ್ದಾರೆ.

ತಮ್ಮ 45ನೇ ವರ್ಷದಲ್ಲಿ ಮಗುವನ್ನು ಹೆತ್ತ ದಂಪತಿ ಮಗುವನ್ನು 1 ಲಕ್ಷ ರೂಪಾಯಿಗೆ ಮಾರಾಟ ಮಾಡಲು ಮುಂದಾಗಿದ್ದಾರೆ. ನಿವೃತ್ತ ನರ್ಸ್ ಸಹೋದರ ಕಾರ್ಕಳದ ರಾಘವೇಂದ್ರ ಎಂಬವರಿಗೆ ಮಗುವನ್ನು ಮಾರಾಟ ಮಾಡಲಾಗಿತ್ತು. ನರ್ಸ್ ಕುಸುಮಾ ಮಗುವಿನ ಮಾರಾಟಕ್ಕೆ ಸಹಕಾರಿಸಿದ್ದರು.

ರತ್ನ ಹಾಗೂ ಸದಾನಂದ ದಂಪತಿಗೆ ಮೂವರು ಮಕ್ಕಳಿದ್ದಾರೆ. ಈ ಪೈಕಿ ಇಬ್ಬರನ್ನು ಮಾರಾಟ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಘಟನೆ ಸಂಬಂಧ ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

<

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ