ಸಂಬಾಲ್‌ನಲ್ಲಿ ಅತಿಕ್ರಮಣ ತೆರವು ಕಾರ್ಯಾಚರಣೆ: 1978ರ ಗಲಭೆಯ ಬಳಿಕ ಮುಚ್ಚಿ ಹೋಗಿದ್ದ ಮಂದಿರ ಪತ್ತೆ
ಉತ್ತರ ಪ್ರದೇಶದ ಸಂಬಾಲ್ ನಲ್ಲಿ ಅತಿಕ್ರಮಣ ತೆರವು ಕಾರ್ಯಾಚರಣೆ ಮುಂದುವರಿದಿದ್ದು ಇದರ ನಡುವೆ 1978ರ ಗಲಭೆಯ ಬಳಿಕ ಮುಚ್ಚಿ ಹೋಗಿದ್ದ ಮಂದಿರ ಪತ್ತೆಯಾಗಿದೆ. ಇದನ್ನು ಭಸ್ಮ ಶಂಕರ್ ಮಂದಿರ ಎಂದು ಕರೆಯಲಾಗಿದ್ದು ಇದರ ಕಾರ್ಬನ್ ಡೇಟಿಂಗ್ ಮಾಡಬೇಕು ಎಂದು ಜಿಲ್ಲಾಡಳಿತ ಆರ್ಕಿಯೋಲಜಿಕಲ್ ಸರ್ವೆ ಆಫ್ ಇಂಡಿಯಾ ವನ್ನು ಕೋರಿಕೊಂಡಿದೆ.
ಇದೇ ವೇಳೆ ಸೋಶಿಯಲ್ ಮೀಡಿಯಾದಲ್ಲಿ ಈ ಮಂದಿರ ಪತ್ತೆಯ ಬಗ್ಗೆ ಸುಳ್ಳು ಸುದ್ದಿಗಳು ಪ್ರಸಾರವಾಗುತ್ತಿದ್ದು ಮುಸ್ಲಿಮರ ಮನೆಯೊಳಗೆ ಬಚ್ಚಿಟ್ಟಿದ್ದ ಮಂದಿರವನ್ನು ಪತ್ತೆಹಚ್ಚಲಾಗಿದೆ ಎಂದು ಮುಂತಾಗಿ ಬರಹಗಳು ಕಾಣಿಸಿಕೊಂಡಿದೆ.
ಸಂಭಾಲ್ ನಲ್ಲಿ 1978ರಲ್ಲಿ ಗಲಭೆ ನಡೆದಿತ್ತು. ಆ ಗಲಭೆಯ ಕಾರಣದಿಂದ ಹಿಂದು ಸಮುದಾಯ ಈ ಪ್ರದೇಶದಿಂದ ಬೇರೆಡೆಗೆ ವಲಸೆ ಹೋಗಿದೆ. ಈ ಹಿನ್ನೆಲೆಯಲ್ಲಿ ಈ ಮಂದಿರವನ್ನು ಮುಚ್ಚಲಾಗಿತ್ತು ಎಂದು ಹಿಂದೂ ಮಹಾಸಭಾ ರಕ್ಷಾ ಅಧಿಕಾರಿ ವಿಷ್ಣುಶಂಕರ್ ರಸ್ತೋಗಿ ಹೇಳಿದ್ದಾರೆ.
ಇತ್ತೀಚೆಗೆ ಗೋಲಿಬಾರ್ ನಡೆದ ಸಂಭಾಲ್ ಶಾಹಿ ಜುಮಾ ಮಸೀದಿ ಗಿಂತ ಈ ಮಂದಿರ ಪ್ರದೇಶವು ಒಂದು ಕಿಲೋಮೀಟರ್ ದೂರದಲ್ಲಿದೆ ಈಗ ಇಲ್ಲಿ ಪೂಜೆ ಇತ್ಯಾದಿಗಳನ್ನು ನೆರವೇರಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj