ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿದ ನ್ಯಾಯಾಧೀಶರನ್ನು ಹೊಗಳಿದ ಯೋಗಿ
ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿದ ಅಲಹಾಬಾದ್ ಹೈಕೋರ್ಟಿನ ನ್ಯಾಯಾಧೀಶ ಶೇಖರ್ ಕುಮಾರ್ ಯಾದವ್ ರನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬೆಂಬಲಿಸಿದ್ದಾರೆ.
ಸತ್ಯ ಹೇಳುವವರ ವಿರುದ್ಧ ಇಂಪೀಚ್ ಮೆಂಟ್ ನಿಯಮವನ್ನು ತರಲಾಗುತ್ತದೆ ಮತ್ತು ನಾವು ಸಂವಿಧಾನವನ್ನು ಎತ್ತಿ ಹಿಡಿಯುತ್ತಿದ್ದೇವೆ ಎಂದು ಸಮರ್ಥಿಸಲಾಗುತ್ತದೆ ಎಂದು ಕಾಂಗ್ರೆಸನ್ನು ಅವರು ಟೀಕಿಸಿದ್ದಾರೆ. ಕಾಂಗ್ರೆಸ್ಸಿನ ಈ ನಡವಳಿಕೆ ದ್ವಿಮುಖ ಧೋರಣೆಯೆಂದು ಯೋಗಿ ಆಪಾದಿಸಿದ್ದಾರೆ.
ಸಂವಿಧಾನದ ಕತ್ತು ಹಿಸುಕಿ ದೇಶವನ್ನು ಆಳುವುದಕ್ಕೆ ಪ್ರತಿಪಕ್ಷಗಳು ಬಯಸುತ್ತಿವೆ. ಈ ದೇಶದಲ್ಲಿ ಸಮಾನ ಸಿವಿಲ್ ಕೋಡನ್ನು ಜಾರಿ ಮಾಡಬೇಡವೇ? ಜಗತ್ತಿನ ಎಲ್ಲೆಡೆಯೂ ಬಹುಸಂಖ್ಯಾತ ಸಮುದಾಯ ಹೇಳುವುದನ್ನು ಅನುಸರಿಸಿಯೇ ಕೆಲಸ ಮಾಡಲಾಗುತ್ತದೆ ಎಂದು ಯೋಗಿ ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj