ಮಲ್ಪೆ ಸಮುದ್ರದಲ್ಲಿ ಬಲೆಗೆ ಬಿದ್ದ ಗರಗಸ ಮೀನು ! - Mahanayaka

ಮಲ್ಪೆ ಸಮುದ್ರದಲ್ಲಿ ಬಲೆಗೆ ಬಿದ್ದ ಗರಗಸ ಮೀನು !

garagasa fish
11/03/2022

ಉಡುಪಿ: ಅಳಿವಿನಂಚಿನಲ್ಲಿರುವ ಪ್ರಬೇಧದ  “ಪ್ರಿಸ್ಟಿಸ್  ಪ್ರಿಸ್ಟಿಸ್”(ಗರಗಸ ಮೀನು) ಮೀನು  ಮಲ್ಪೆ ಸಮುದ್ರದಲ್ಲಿ ಮೀನುಗಾರರಿಗೆ ಸಿಕ್ಕಿದೆ.

10 ಅಡಿ ಉದ್ದ ಹಾಗೂ 100 ಕೆ.ಜಿ. ತೂಕವಿರುವ ಮೀನಿನ ಹಲ್ಲುಗಳು ಗರಗಸ ಮಾದರಿಯಲ್ಲಿದ್ದು, ಇಂತಹ ಮೀನು ಮೂರು ಪ್ರಬೇಧಗಳಲ್ಲಿ ಕಂಡು ಬರುತ್ತವೆ.

ಈ ಮೀನಿನ ಹಲ್ಲುಗಳು ಗರಗಸ ಮಾದರಿಯಲ್ಲಿದ್ದು, ಹೀಗಾಗಿ ಸ್ಥಳೀಯವಾಗಿ ಇದನ್ನು ಗರಗಸ ಮೀನು ಎಂದು ಕರೆಯುತ್ತಾರೆ.  ಸಮಶೀತೋಷ್ಣ ಹಾಗೂ ಉಷ್ಣವಲಯದ ಸಮುದ್ರಗಳಲ್ಲಿ ಈ ಮೀನು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಪ್ರಸ್ತುತ ಇದು ಅಳಿವಿನಂಚಿನಲ್ಲಿರುವ  ಮೀನಾಗಿದ್ದು, ಇದನ್ನು ಬೇಟೆಯಾಡುವುದು ಶಿಕ್ಷಾರ್ಹ ಅಪರಾಧವಾಗಿದೆ.

ಈ ಮೀನು ಚೂಪಾದ ತನ್ನ ಗರಗಸದಿಂದ ದಾಳಿ ಮಾಡಿ ಇತರ ಜಾತಿಯ ಮೀನುಗಳನ್ನು ತಿನ್ನುತ್ತದೆ. ಮೀನುಗಳು, ಶಂಕು, ಸೀಗಡಿ ಮೊದಲಾದವುಗಳು ಈ ಮೀನಿನ ಪ್ರಧಾನ ಆಹಾರವಾಗಿದ್ದು, ಸಮುದ್ರದಲ್ಲಿ  20 ಮೀಟರ್ ಆಳದಲ್ಲಿ ಇದು ಜೀವಿಸುತ್ತದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕಾಂಗ್ರೆಸ್ ಅವನತಿ ಆರಂಭ: ಸಂಸದ ಪ್ರತಾಪ್ ಸಿಂಹ

ರಾಜೀವ್ ಹಂತಕ ಜಾಮೀನಿನಲ್ಲಿ ಬಿಡುಗಡೆಯಾಗುತ್ತಿದ್ದಂತೆಯೇ ಮದುವೆಗೆ ಸಿದ್ಧತೆ!

ದೇಶದ 2ನೇ ಅತೀ ದೊಡ್ಡ ಶ್ರೀಮಂತ ಪಕ್ಷ ಬಿಎಸ್ ಪಿಗೆ ಹೀನಾಯ ಸೋಲು | ಮಾಯಾವತಿಜಿ ಇದು ನ್ಯಾಯವೇ?

ಪೊಲೀಸರ ಮೇಲೆ ಹೆಜ್ಜೇನು ದಾಳಿ: ಇಬ್ಬರು ಗಂಭೀರ

ಪಂಜಾಬ್​ ನಲ್ಲಿ ಬಿಜೆಪಿಗೆ ನೆಲೆ ಇರಲಿಲ್ಲ: ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ

ಇತ್ತೀಚಿನ ಸುದ್ದಿ