ಸಂಜನಾ ಅವರನ್ನ ಬಲವಂತವಾಗಿ ಧರ್ಮಾಂತರ ಮಾಡಲಾಗಿದೆ | ವಕೀಲನಿಂದ ದೂರು - Mahanayaka
5:56 AM Thursday 7 - December 2023

ಸಂಜನಾ ಅವರನ್ನ ಬಲವಂತವಾಗಿ ಧರ್ಮಾಂತರ ಮಾಡಲಾಗಿದೆ | ವಕೀಲನಿಂದ ದೂರು

14/12/2020

ಬೆಂಗಳೂರು: ನಟಿ ಸಂಜನಾ ಅವರು ಡ್ರಗ್ಸ್ ಪ್ರಕರಣದಲ್ಲಿ ಜಾಮೀನು ಪಡೆದ ಬಳಿಕ ಇದೀಗ ಮತ್ತೆ ಸುದ್ದಿಯಾಗುತ್ತಿದ್ದು, ಸಂಜನಾ ಅವರನ್ನು ಬಲವಂತವಾಗಿ ಧರ್ಮಾಂತರ ಮಾಡಲಾಗಿದೆ ಎಂಬ ದೂರೊಂದು ದಾಖಲಾಗಿದೆ.

ವಕೀಲ ಅಮೃತೇಶ್ ಎಂಬವರು ಈ ದೂರನ್ನು ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದಾರೆ.  ಡ್ರಗ್ಸ್ ಪ್ರಕರಣದ ಹಿನ್ನೆಲೆಯಲ್ಲಿ ಜೈಲು ಸೇರಿದ್ದ ಸಂದರ್ಭದಲ್ಲಿ ಸಂಜನಾ ಅವರು ಮುಸ್ಲಿಮ್ ವೈದ್ಯರೊಬ್ಬರನ್ನು ವಿವಾಹವಾಗಿದ್ದರು ಎನ್ನುವುದು ತಿಳಿದು ಬಂದಿತ್ತು.

ಸಂಜನಾ ಅವರು ಖುದ್ದು ತಮ್ಮ ಒಪ್ಪಿಗೆಯೊಂದಿಗೆ ಬೆಂಗಳೂರಿನ ಟ್ಯಾನರಿ ರಸ್ತೆಯ ದಾರುಲ್ ಉಲಮ್ ಶಾ ವಲಿಲುಲ್ಲಾ ಅವರು ಧರ್ಮಾಂತರ ಮಾಡಿಕೊಂಡಿದ್ದರು ಎಂದು ಹೇಳಲಾಗಿತ್ತು. ಆದರೆ ಈ ಕುರಿತು ಇದೀಗ ಸಂಬಂಧವೇ ಇಲ್ಲದ ಮೂರನೇ ವ್ಯಕ್ತಿಯೊಬ್ಬರು ದೂರು ದಾಖಲಿಸಿದ್ದು, ಅಚ್ಚರಿಗೆ ಕಾರಣವಾಗಿದೆ.

ಸಂಜನಾ ಅವರು ತಮ್ಮ ವೈಯಕ್ತಿಕ ಜೀವನವನ್ನು ಬಹಿರಂಗ ಪಡಿಸಿರಲಿಲ್ಲ. ಇದು ಅವರ ವೈಯಕ್ತಿಕ ಹಕ್ಕು ಕೂಡ ಆಗಿದೆ. ಆದರೆ, ಇದೀಗ ಹಲವು ರಾಜ್ಯಗಳಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಲವ್ ಜಿಹಾದ್ ಮೊದಲಾದ ಪದ ಪ್ರಯೋಗವಾಗುತ್ತಿದ್ದು, ಇದೀಗ ರಾಜಕೀಯ ಜಾಲದೊಳಗೆ ಸಂಜನಾ ಅವರು ಬಳಕೆಯಾಗುವ ಸಾಧ್ಯತೆಗಳಿವೆಯೇ? ಎನ್ನುವ ಪ್ರಶ್ನೆಗಳು ಕೇಳಿ ಬಂದಿದೆ.

ಇತ್ತೀಚಿನ ಸುದ್ದಿ