ರಾಜ್ಯಪಾಲರು ಪ್ರಯಾಣಿಸುತ್ತಿದ್ದ ಕಾರು ಮರಕ್ಕೆ ಡಿಕ್ಕಿ - Mahanayaka
3:44 PM Wednesday 11 - September 2024

ರಾಜ್ಯಪಾಲರು ಪ್ರಯಾಣಿಸುತ್ತಿದ್ದ ಕಾರು ಮರಕ್ಕೆ ಡಿಕ್ಕಿ

14/12/2020

ಹೈದರಾಬಾದ್:  ಹಿಮಾಚಲಪ್ರದೇಶ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರು ಪ್ರಯಾಣಿಸುತ್ತಿದ್ದ ಕಾರು ರಸ್ತೆ ಬದಿಯಲ್ಲಿದ್ದ  ಮರಕ್ಕೆ ಡಿಕ್ಕಿಯಾದ ಘಟನೆ ನಡೆದಿದ್ದು, ರಾಜ್ಯಪಾಲರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.

ನಲ್ಗೊಂಡದಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ರಾಜ್ಯಪಾಲ ಬಂಡಾರು ದತ್ತಾತ್ರೇಯ ಹೋಗುತ್ತಿದ್ದು, ಹೈದರಾಬಾದ್-ವಿಜಯವಾಡ ಹೆದ್ದಾರಿಯ ಚೌತುಪ್ಪಲ್ ಮಂಡಲದ ಕೈತಪುರಂ ಬಳಿ ಅಪಘಾತ ಸಂಭವಿಸಿದೆ.

ಅಪಘಾತದಿಂದ ಕಾರು ಜಖಂ ಆಗಿದ್ದು ಆ ಘಟನಾ ನಂತರ ರಾಜ್ಯಪಾಲರು ಮತ್ತೊಂದು ವಾಹನದಲ್ಲಿ ನಲ್ಗೊಂಡಕ್ಕೆ ತೆರಳಿದ್ದಾರೆ ಎಂದು ರಾಜ್ಯಪಾಲರ ಸಹಾಯಕ ಕೈಲಾಶ್ ನಾಗೇಶ್ ತಿಳಿಸಿದ್ದಾರೆ.


Provided by

ರಾಜ್ಯ ಸರ್ಕಾರ ಒದಗಿಸಿದ ವಾಹನ ಸುಸ್ಥಿತಿಯಲ್ಲಿರಲಿಲ್ಲ ಎಂದು ನಾಗೇಶ್ ಅವರು ತಿಳಿಸಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಕಾರು ನಜ್ಜುಗುಜ್ಜಾಗಿದೆ.

ಇತ್ತೀಚಿನ ಸುದ್ದಿ