ರಸ್ತೆ ಅಪಘಾತ: ಆರೆಸ್ಸೆಸ್ ಮುಖಂಡನ ದಾರುಣ ಸಾವು - Mahanayaka

ರಸ್ತೆ ಅಪಘಾತ: ಆರೆಸ್ಸೆಸ್ ಮುಖಂಡನ ದಾರುಣ ಸಾವು

15/12/2020

ಬಂಟ್ವಾಳ: ಬ್ಯಾರಿಕೇಡ್ ಗೆ ಬೈಕ್ ಡಿಕ್ಕಿಯಾಗಿ ಆರೆಸ್ಸೆಸ್ ಮುಖಂಡರೋರ್ವರು ಮೃತಪಟ್ಟ ಘಟನೆ ಮಂಗಳವಾರ ನಸುಕಿನ ಜಾವ ಪುತ್ತೂರು ಸಂಚಾರಿ ಠಾಣಾ ವ್ಯಾಪ್ತಿಯ ಕಬಕ ಸಮೀಪದ ಪೋಳ್ಯದಲ್ಲಿ ನಡೆದಿದೆ.

ಬಿ.ಸಿ.ರೋಡಿನ ಅಗ್ರಬೈಲ್ ನಿವಾಸಿ, ಆರೆಸ್ಸೆಸ್ ಮಂಗಳೂರು ವಿಭಾಗ ಗ್ರಾಮವಿಕಾಸ ಪ್ರಮುಖ ವೆಂಕಟರಮಣ ಹೊಳ್ಳ (60) ಮೃತಪಟ್ಟವರಾಗಿದ್ದಾರೆ.  ಸೋಮವಾರ ಆರೆಸ್ಸೆಸ್ ಬೈಠಕ್ ಮುಗಿಸಿ ಅವರು ಪುತ್ತೂರಿನಲ್ಲೇ ತಂಗಿದ್ದು,  ಮಂಗಳವಾರ ಬಿ.ಸಿ.ರೋಡ್ ನಲ್ಲಿರುವ ತನ್ನ ಮನೆಗೆ ಅವರು ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರಿಗೆ ಮಾರ್ಗದರ್ಶಕರಾಗಿದ್ದ ವೆಂಕಟರಮಣ ಅವರು, ತಮ್ಮ ಮನೆಯಲ್ಲಿಯೇ ಅವರಿಗೆ ಸಂಘದ ಶಿಕ್ಷಣವನ್ನು ನೀಡಿದ್ದರು. ಇತ್ತೀಚೆಗೆ ಆತ್ಮನಿರ್ಭರರಾಗುವ ಉದ್ಯೋಗ ತರಬೇತಿಯನ್ನು ಅವರು ಬಿ.ಸಿ.ರೋಡ್, ಸುಳ್ಯ, ಪುತ್ತೂರಿನಲ್ಲಿ ಆಯೋಜಿಸಿದ್ದರು.

Disclaimer:

www.mahanayaka.in ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳಲ್ಲಿ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗುವಂತಹ ಅಥವಾ ನೋವುಂಟಾಗುವಂತಹ ಅಥವಾ ನಿಮಗೆ ಆಕ್ಷೇಪಾರ್ಹ ಎನಿಸಿದಂತಹ ಅಂಶಗಳ ಬಗ್ಗೆ ಓದುಗರು 9686872149 ನಂಬರ್ ಗೆ ಸುದ್ದಿಯ ಲಿಂಕ್ ಸಹಿತ ನಿಮ್ಮ ದೂರು ಸಲಹೆಗಳನ್ನು ವಾಟ್ಸಾಪ್ ಮಾಡಬಹುದು. ಅಥವಾ ಕರೆ ಮಾಡಬಹುದು. ನಿಮ್ಮ ದೂರನ್ನು ಪರಿಶೀಲಿಸಿ, ಅಂತಹ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲು ಮಾಧ್ಯಮವು ಬದ್ಧವಾಗಿದೆ.

ಇತ್ತೀಚಿನ ಸುದ್ದಿ