ಉದ್ಯೋಗ ಅರಸಿ ಬಂದವರಿಗೆ ಭಾರೀ ಮೋಸ | ವಿದ್ಯಾವಂತ ನಿರುದ್ಯೋಗಿಗಳು ಇದೀಗ ಹಣ ಕಳೆದುಕೊಂಡು ಬೀದಿಪಾಲು - Mahanayaka
10:45 PM Wednesday 11 - September 2024

ಉದ್ಯೋಗ ಅರಸಿ ಬಂದವರಿಗೆ ಭಾರೀ ಮೋಸ | ವಿದ್ಯಾವಂತ ನಿರುದ್ಯೋಗಿಗಳು ಇದೀಗ ಹಣ ಕಳೆದುಕೊಂಡು ಬೀದಿಪಾಲು

14/12/2020

ಮಂಗಳೂರು: ITM ಸೇಲ್ ಮಾರ್ಕೆಟಿಂಗ್ ಕಂಪೆನಿ ಹೆಸರಿನಲ್ಲಿ ಸಿಸ್ಟಮ್ ಕೆಲಸ ಕೊಡುವುದಾಗಿ ನಂಬಿಸಿ ಸುಮಾರು 500ಕ್ಕೂ ಅಧಿಕ ಜನರಿಗೆ ಪಂಗನಾಮ ಹಾಕಿದ ಘಟನೆ ಮಂಗಳೂರಿನಲ್ಲಿ ನಡೆದಿದ್ದು, ಸಾಲ ಮಾಡಿ, ಚಿನ್ನ ಅಡವಿರಿಸಿ ಉದ್ಯೋಗದ ಆಸೆಯಿಂದ ಬಂದ ಯುವಕ, ಯುವತಿಯರು ಇದೀಗ ಅಕ್ಷರಶಃ ಬೀದಿ ಪಾಲಾಗಿದ್ದಾರೆ.

ಈ ಯುವಕ -ಯುವತಿಯರಿಗೆ SRM ಪರ್ಚೆಸಿಂಗ್ ಅಂತ 38,080 ಸಾವಿರ ರೂ. ಹಾಗೂ RM ಪರ್ಚೆಸಿಂಗ್ ಅಂತ 13,664 ಸಾವಿರ ರೂಪಾಯಿಗಳನ್ನು ಪೀಕಿಸಿ ವಂಚನೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ತಾವು ಮೋಸ ಹೋಗಿದ್ದೇವೆ ಎನ್ನುವುದು ತಿಳಿಯುತ್ತಿದ್ದಂತೆಯೇ ಕಂಪೆನಿಯ ಎಂಡಿಯನ್ನು ಹುಡುಕಿದ ಸಂತ್ರಸ್ತರು, ಮಂಗಳೂರಿನ ಹೊರವಲಯದ ಕುತ್ತಾರು, ಪಂಡಿತ್ ಹೌಸ್ ಬಳಿಕ ಅಪಾರ್ಟ್ ಮೆಂಟ್ ಗೆ ಬಂದು  ಪ್ರತಿಭಟನೆ ನಡೆಸಿದ್ದಾರೆ.


Provided by

ಮಂಗಳೂರಿನ ಕೊಟ್ಟಾರ ಚೌಕಿಯಲ್ಲಿ  ITM ಎಂಬ ಕಂಪನಿಯ ಕಚೇರಿ ಇದೆ ಎನ್ನಲಾಗುತ್ತಿದ್ದು.  ಕುಂದಾಪುರ, ಪುತ್ತೂರು, ಸುಳ್ಯ, ಕಾರ್ಕಳದಿಂದ ಬಂದ ಡಿಗ್ರಿ ಮುಗಿಸಿದ ಯುವಕ – ಯುವತಿಯರಿಗೆ ಸಿಸ್ಟಮ್ ಬೇಸ್ ಕೆಲಸ ಕೊಡಿಸುವುದಾಗಿ ನಂಬಿಸಿ ಕರೆಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಕಂಪೆನಿಯಲ್ಲಿ ಟ್ರೈನಿಂಗ್ ಹೆಸರಿನಲ್ಲಿ ಸಂತ್ರಸ್ತರಿಂದ ಆರಂಭದಲ್ಲಿ 2,500 ಸಾವಿರ ರೂ. ಟ್ರೈನಿಂಗ್ ಫೀಸ್ ಪಡೆಯಲಾಗಿದೆ. ಮೂರು ದಿನ ಟ್ರೈನಿಂಗ್ ಕೊಟ್ಟು ಬಳಿಕ ನಾಲ್ಕುನೆ ದಿನ ಕಳೆದಾಗ 38,080 ಸಾವಿರ ರೂಪಾಯಿ ಹಣ ಕೊಡುವಂತೆ ಹೇಳಿದ್ದು ಕಷ್ಟದಲ್ಲಿ ಸಾಲ ಮಾಡಿ ಸಂತ್ರಸ್ತರು ಹಣ ಕಟ್ಟಿದ್ದಾರೆ. ತಿಂಗಳಿಗೆ 14 ಸಾವಿರ ಸಂಬಳ ಎಂದು ನಂಬಿಸಿದ್ದರು ಈ ಕಂಪೆನಿ ನಂಬಿಸಿತ್ತು ಎಂದು ಸಂತ್ರಸ್ತರು ಆರೋಪಿಸಿದ್ದಾರೆ.

ಇಲ್ಲಿವರೆಗೂ ಟರ್ಕಿಯಲ್ಲಿದ್ದ ಕಚೇರಿಯಲ್ಲಿ ಉಳಿದುಕೊಂಡಿದ್ದ ನಮಗೆ ಮೋಸದ ಅರಿವಾಗಿದ್ದು ತಾವು ಕಷ್ಟಪಟ್ಟು ಸಾಲ ಮಾಡಿ ಕಟ್ಟಿದ್ದ ಹಣಕ್ಕಾಗಿ ಕೆಲವರಲ್ಲಿ ಹೇಳಿಕೊಂಡಿದ್ದಾರೆ. ಕೆಲವು ಯುವತಿಯರು ತಮ್ಮ ಚಿನ್ನವನ್ನು ಅಡವಿಟ್ಟು ಕೆಲಸಕ್ಕೆ ಬಂದಿದ್ದು ತಾವು ಕೊಟ್ಟ ಹಣವನ್ನಾದರೂ ಕೊಡಿ ಎಂದು ಅಂಗಲಾಚುತ್ತಿದ್ದಾರೆ.

ಕಳೆದ ಒಂದು ತಿಂಗಳಿಂದ ಕಂಪನಿಯ MD ತಪ್ಪಿಸಿಕೊಳ್ಳುತ್ತಿದ್ದು ನೀವು ಊರಿಗೆ ಹೋಗಿ ಆಫೀಸ್ ಶಿಫ್ಟ್ ಮಾಡುತ್ತಿದ್ದೇವೆ ಎನ್ನುತ್ತಿದ್ದಾರೆ. ಕಂಪನಿ MD ಹೇಮಂತ್ ಬಿ.ವಿ. ಎಂದು ಯುವತಿಯರು ಹೇಳಿಕೊಂಡಿದ್ದು, ಹಣ ಕೇಳಿದರೆ, ನಾವು ಕಂಪನಿ‌ ಶಿಪ್ಟ್ ಮಾಡ್ತಿದ್ದೇವೆ, ಈಗ ಕಂಪೆನಿ ರಜೆ ಇದೆ, ನಾವು ಊರಲ್ಲಿದ್ದೇವೆ, ನಾವು ಬೇರೆಡೆಗೆ ಸ್ಥಳಾಂತರಗೊಳ್ಳಿ, ರೂಂ‌ ಗಳಿಗೆ ಸ್ಯಾನಿಟೈಸರ್ ಮಾಡ್ಬೇಕಂತ ನೆಪ ಹೇಳ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇನ್ನೂ ಈ ಸಂಬಂಧ ಮಂಗಳೂರಿನ ಕಾವೂರು ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳೀಯ ಹಿಂದೂ ಸಂಘಟನೆಗಳನ್ನೂ ಸಂಪರ್ಕಿಸಿರುವ ಸಂತ್ರಸ್ತರು ತಮಗೆ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿ