"ಸರ್ಕಾರಿ ನೌಕರರಾಗೋಣ" - Mahanayaka
1:31 AM Thursday 30 - November 2023

“ಸರ್ಕಾರಿ ನೌಕರರಾಗೋಣ”

13/12/2020

ಎದ್ದೇಳಿ ಸಕಲ  ಸಾರಿಗೆ ನೌಕರರೆ
ನೀವೇನೂ ಕಮ್ಮಿ ಸರ್ಕಾರಿ ನೌಕರರಿಗೆ
ಸರ್ಕಾರಿ ನೌಕರರೆ೦ಬ ಬೇಡಿಕೆಯು
ನಮ್ಮ ದುಡಿಮೆಗೆ ಸಿಗಬೇಕಾದ
ಅಹ೯ತೆಯು ॥

ಹಗಲಿರುಳು ಸೇವೆ  ಸಲ್ಲಿಸುವಿರಿ
ಸಾವ೯ಜನಿಕ ಸೇವೆಗೈಯುವಿರಿ
ವೇತನದಿ ತಾರತಮ್ಯ  ಏಕೆ ಸಹಿಸುವಿರಿ
ನಮಗೂ ಸಿಗಲಿ ಸರ್ಕಾರಿ ಸೌಲಭ್ಯವೂ ॥

ಬಸ್ಸು  ಮಾತ್ರ  ಸರ್ಕಾರದ್ದ೦ತೆ
ನಾವು ಖಾಸಗಿ ನೌಕರರ೦ತೆ
ಇದು ಯಾವ ನ್ಯಾಯ ಕೇಳೋಣ
ಈ ತಾರತಮ್ಯ ಸರಿಪಡಿಸಿ ನಾವು ಸರ್ಕಾರಿ ನೌಕರರಾಗೋಣ॥

ಪಕ್ಷ ಬೇಧವ ಮರೆಯೋಣ
ಎಲ್ಲಾ ನಾಯಕರ ಬೆಂಬಲ ಪಡೆಯೋಣ
ಎಲ್ಲರೂ ಹೋರಾಟವ ಮಾಡೋಣ
ಸರ್ಕಾರಿ ನೌಕರರಾಗೋದು ನಮ್ಮ ಹಕ್ಕು ಎನ್ನೋಣ॥

ಪತ್ರಿಕಾ ಮಾಧ್ಯಮಗಳ ಬಳಿ ಹೋಗೋಣ
ಸ೦ಘ ಸಂಸ್ಥೆಗಳ ಪ್ರೋತ್ಸಾಹ ಪಡೆಯೋಣ
ನಮ್ಮಯ ಕಷ್ಟ ನಷ್ಟ ಗಳ ತಿಳಿಸೋಣ
ನಮ್ಮ ನ್ಯಾಯಯುತ ಬೇಡಿಕೆ ಕೇಳೋಣ

ನಮಗೆ ಬೇಡ ಹತ್ತು ಹಲವು ಬೇಡಿಕೆಗಳು
ನಮಗಿರಲಿ ಒಂದೇ ಬೇಡಿಕೆಯು
ಅದುವೇ ಸರ್ಕಾರಿ ನೌಕರರ ಬೇಡಿಕೆಯು
ಇದು ನಮ್ಮ ಶ್ರಮಕ್ಕೆ ಸಿಗಬೇಕಾದ ಅಹ೯ತೆಯು॥

ಕೆಲಸವ ಕೊಟ್ಟ ಸಂಸ್ಥೆಯ ನೆನೆಯುತ
ಹೆಮ್ಮೆಯಿಂದ ದುಡಿಮೆಯ ಮಾಡುತ
ಸರ್ಕಾರಿ ಆದೇಶ ತಪ್ಪದೇ ಪಾಲಿಸುವ ನಮಗೆ
ಸರ್ಕಾರಿ ನೌಕರ ಆದೇಶ ಬರುವತನಕ ಹೋರಾಡೋಣ॥

ganapati gagocha

ರಚನೆ :ಗಣಪತಿ ಗೋ ಚಲವಾದಿ (ಗಗೋಚ)
ಬಿ ಎಮ್.ಟಿ.ಸಿ. ನಿರ್ವಾಹಕರು
ಕಸಾಪ ಮಯೂರ ವರ್ಮ
ಸಾಹಿತ್ಯ ಪ್ರಶಸ್ತಿ ಪುರಸ್ಕೃತರು
ಸಾಹಿತಿಗಳು ವಿಜಯಪುರ ಜಿಲ್ಲೆ

ಇತ್ತೀಚಿನ ಸುದ್ದಿ