ಮೇಕೆಯಲ್ಲೂ ದೇವರಿದ್ದಾನೆ, ಮೊಟ್ಟೆಯಲ್ಲೂ ದೇವರಿದ್ದಾನೆ: ಸಸ್ಯಾಹಾರಿಗಳಿಂದ ಜಾಗೃತಿ ಜಾಥಾ!
ನೆಲಮಂಗಲ: ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟಿ ಮೂವ್ ಮೆಂಟ್ ಇಂಡಿಯಾ ಹಾಗೂ ವಿಶ್ವ ಚೇತನ ಕ್ವಾಂಟಮ್ ಫೌಂಡೇಶನ್ ವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಪಟ್ಟಣದಲ್ಲಿ ಸಸ್ಯಹಾರದ ಕುರಿತು ಜಾಗೃತಿ ಜಾಥಾ ನಡೆಯಿತು.
ಪಟ್ಟಣದ ವೀರಭದ್ರೇಶ್ವರ ಮಠದಿಂದ ವಿಶ್ವಶಾಂತಿ ಆಶ್ರಮದವರೆಗೂ ಜಾಥಾ ನಡೆದಿದ್ದು, ರಸ್ತೆಯುದ್ದಕ್ಕೂ ಮಾಂಸಾಹಾರದ ವಿರುದ್ಧ ಸಸ್ಯಹಾರಿಗಳು ಘೋಷಣೆ ಕೂಗಿದರು.
ಮೇಕೆಯಲ್ಲೂ ದೇವರಿದ್ದಾನೆ, ಮೊಟ್ಟೆಯಲ್ಲೂ ದೇವರಿದ್ದಾನೆ, ಸಕಲ ಪ್ರಾಣಿಗಳಲ್ಲೂ ದೇವರಿದ್ದಾನೆ ಸಸ್ಯಹಾರ ಜಗತ್ತಿಗೆ ಜೈ ಎಂಬಂತಹ ಹಲವು ಘೋಷಣೆಗಳನ್ನು ಕೂಗಿದ ಸಸ್ಯಹಾರಿಗಳು, ಪ್ರಾಣಿಗಳನ್ನು ಜೀವಿಸಲು ಬಿಡಿ, ಸ್ವತಂತ್ರವಾಗಿ ಬದುಕಲು ಬಿಡಿ ಎಂದು ಘೋಷಣೆ ಕೂಗಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka