ತೆಂಗಿನ ಕಾಯಿ ತೆಗೆಯಲು ಬಂದ ವ್ಯಕ್ತಿಯಿಂದ ಬಾಲಕಿಗೆ ಲೈಂಗಿಕ ಕಿರುಕುಳ - Mahanayaka

ತೆಂಗಿನ ಕಾಯಿ ತೆಗೆಯಲು ಬಂದ ವ್ಯಕ್ತಿಯಿಂದ ಬಾಲಕಿಗೆ ಲೈಂಗಿಕ ಕಿರುಕುಳ

ullala
13/12/2022

ಕೊಣಾಜೆ: ಏಳನೇ ತರಗತಿ ವಿದ್ಯಾರ್ಥಿನಿಗೆ ವ್ಯಕ್ತಿಯೋರ್ವ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ಮಂಗಳೂರು ನಗರದ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಶೀರ್(28) ಎಂಬಾತ ಆರೋಪಿತ ವ್ಯಕ್ತಿ. ತೆಂಗಿನಕಾಯಿ ಕೀಳುವ ಕೆಲಸ ಮಾಡುವ ಈತ ಬಾಲಕಿಯ ಮನೆಮಂದಿಗೆ ಪರಿಚಿತನಾಗಿದ್ದ. ರವಿವಾರ ಮಧ್ಯಾಹ್ನ ಮನೆಯಲ್ಲಿ ಬಾಲಕಿ ಒಂಟಿಯಾಗಿದ್ದ ವೇಳೆ ತೆಂಗಿನಕಾಯಿ ಕೀಳಲೆಂದು ಈತ ಬಂದಿದ್ದ. ಈ ವೇಳೆ ಬಾಲಕಿ ಒಂಟಿಯಾಗಿರುವುದನ್ನು ಕಂಡು ಆಕೆಯ ಕೈ ಹಿಡಿದು ಹೊರಗೆ ಎಳೆದಿದ್ದಾನೆ ಎಂದು ಆರೋಪಿಸಲಾಗಿದೆ.

ಕೈ ಹಿಡಿದೆಳೆದ ವೇಳೆ ಬಾಲಕಿ ಕಿರುಚಾಡಲು ಆರಂಭಿಸಿದ್ದು, ಮಾಹಿತಿ ಪಡೆದ ಸ್ಥಳೀಯರು ಮನೆಯತ್ತ ಆಗಮಿಸುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದಾನೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ