ಶಾವರ್ಮಾದಲ್ಲಿ ಬಳಸುವ ಮಯೋನೆಸ್ ಎಷ್ಟು ಅಪಾಯಕಾರಿ? - Mahanayaka

ಶಾವರ್ಮಾದಲ್ಲಿ ಬಳಸುವ ಮಯೋನೆಸ್ ಎಷ್ಟು ಅಪಾಯಕಾರಿ?

shawarma mayonnaise
02/05/2022

ಶಾವರ್ಮಾ ಎಂದರೆ ಸಾಕು, ಸಣ್ಣ ಮಕ್ಕಳಿಂದ ಹಿಡಿದು, ಹಿರಿಯರವರೆಗೆ ಇದನ್ನು ಎಲ್ಲರೂ ತುಂಬಾ ಇಷ್ಟಪಡುತ್ತಾರೆ. ಭಾರತಕ್ಕೆ ಟರ್ಕಿ ದೇಶದ ಸಂಪರ್ಕವಾದ ಬಳಿಕ ಭಾರತೀಯರಿಗೆ ಈ ಶಾವರ್ಮಾ ಪರಿಚಯವಾಯಿತು. ರುಚಿಕರವಾಗಿರುವ ಶಾವರ್ಮಾ ಮಕ್ಕಳ ಅಚ್ಚುಮೆಚ್ಚಿನ ಆಹಾರವಾಗಿದೆ.

ಆರಂಭದಲ್ಲಿ ಕುರಿ ಮಾಂಸವನ್ನು ಬಳಸಿ ಟರ್ಕಿ ದೇಶದವರು ಶಾವರ್ಮಾವನ್ನು ತಯಾರಿಸಿದ್ದರು. ಆ ಬಳಿಕ ದನದ ಮಾಂಸದಿಂದಲೂ ಶಾವರ್ಮಾ ತಯಾರಿಸಿದ್ದರು. ಆ ಬಳಿಕ ಕೋಳಿ ಮಾಂಸದಿಂದ ಶಾವರ್ಮಾ ತಯಾರಿಸಿದ್ದರು. ಭಾರತದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕೋಳಿ ಮಾಂಸದ ಮೂಲಕವೇ ಶಾವರ್ಮಾವನ್ನು ತಯಾರಿಸುತ್ತಿದ್ದಾರೆ.

ಶಾವರ್ಮಾ ಎಷ್ಟು ರುಚಿಕರವೋ ಅಷ್ಟೇ ಅಪಾಯಕಾರಿಯೂ ಆಗಿದೆ. ಇದರ ತಯಾರಿಕೆಯಲ್ಲಿ ಸಾಕಷ್ಟು ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ಶಾವರ್ಮಾದಲ್ಲಿ ಹೆಚ್ಚಾಗಿ ಬಳಸುವ ಮಯೋನೆಸ್, ಫುಡ್ ಪಾಯ್ಸನ್ ಗೆ ಕಾರಣವಾಗಬಹುದು. ಕೋಳಿ ಮೊಟ್ಟೆಯಿಂದ ಮೊಸರನ್ನು ಹೋಲುವ ಬಿಳಿ ಬಣ್ಣದ ಮಯೋನೆಸ್ ನ್ನು ತಯಾರಿಸಲಾಗುತ್ತದೆ.

ಹಸಿ ಮೊಟ್ಟೆಯಿಂದ ಮಯೋನೆಸ್ ತಯಾರಿಸಲಾಗುತ್ತದೆ. ಹಾಗಾಗಿ ಮೊಟ್ಟೆಯ ಗುಣಮಟ್ಟ ಉತ್ತಮವಾಗಿರದಿದ್ದರೆ, ಅಥವಾ ಮೇಯಾನೆಸ್ ತಯಾರಿಸಿ ಬಹಳಷ್ಟು ಸಮಯವಾಗಿದ್ದರೆ, ಅದು ವಿಷಕ್ಕೆ ಕಾರಣವಾಗಬಹುದು. ಮೊಟ್ಟೆಯನ್ನು ಹಸಿಯಾಗಿ ಬಳಕೆ ಮಾಡುವುದರಿಂದ ಮೊಟ್ಟೆಯಲ್ಲಿರುವ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾಗಳು ದೇಹಕ್ಕೆ ಸೇರಿ ಅಪಾಯವನ್ನುಂಟು ಮಾಡುವ ಸಾಧ್ಯತೆಗಳಿವೆ.

ಶಾವರ್ಮಾಕ್ಕೆ ಬಳಸುವ ಮಾಂಸ ಕೂಡ ಅಷ್ಟೇ ಫ್ರೆಶ್ ಆಗಿರಬೇಕು. ಶೇ.80ರಷ್ಟು ಉರಿಯಲ್ಲಿ ಮಾಂಸ ಬೆಂದಿರಬೇಕು. ಸರಿಯಾಗಿ ಬೆಂದಿರದ ಮಾಂಸವು ಅನಾರೋಗ್ಯಕ್ಕೆ ಕಾರಣವಾಗಬಹುದು. ಫ್ರಿಡ್ಜ್ ನಲ್ಲಿಟ್ಟ ಮಾಂಸವನ್ನು ಶಾವರ್ಮಾಕ್ಕೆ ಬಳಸುವುದು ಉತ್ತಮವಲ್ಲ. ಜೊತೆಗೆ ಹಳೆಯ ಮಯೋನೆಸ್ ನ್ನು ಬಳಸುವುದು ಕೂಡ ಅಪಾಯಕಾರಿಯಾಗಿದೆ. ಹಳೆಯ ಮತ್ತು ಹಾಳಾಗಿರುವ ಮೊಟ್ಟೆಯಿಂದ ಮಯೋನೆಸ್ ತಯಾರಿಸುವುದು ಸುರಕ್ಷಿತವಲ್ಲ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಹೊಟೇಲ್ ನ ಮೆನು ನೋಡಿ ಬಿದ್ದು ಬಿದ್ದು ನಕ್ಕ ಜನ: ಅಷ್ಟಕ್ಕೂ ಅಲ್ಲಿ ನಡೆದದ್ದೇನು?

ಬಿಜೆಪಿಯಲ್ಲಿ ಸಂಚಲನ ಸೃಷ್ಟಿಸಿದ ಬಿ.ಎಲ್.ಸಂತೋಷ್ ಹೇಳಿಕೆ: ಹಾಲಿ ಶಾಸಕರಿಗೂ ಭೀತಿ!

ಶಾವರ್ಮಾ ಸೇವಿಸಿ 16 ವರ್ಷದ ಬಾಲಕಿ ಸಾವು: 36 ಮಂದಿ ಅಸ್ವಸ್ಥ

ಕುಟುಂಬ ರಾಜಕಾರಣವನ್ನು ಏಡ್ಸ್ ಗೆ ಹೋಲಿಸಿದ ಯತ್ನಾಳ್!

Disclaimer:

www.mahanayaka.in ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳಲ್ಲಿ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗುವಂತಹ ಅಥವಾ ನೋವುಂಟಾಗುವಂತಹ ಅಥವಾ ನಿಮಗೆ ಆಕ್ಷೇಪಾರ್ಹ ಎನಿಸಿದಂತಹ ಅಂಶಗಳ ಬಗ್ಗೆ ಓದುಗರು 9686872149 ನಂಬರ್ ಗೆ ಸುದ್ದಿಯ ಲಿಂಕ್ ಸಹಿತ ನಿಮ್ಮ ದೂರು ಸಲಹೆಗಳನ್ನು ವಾಟ್ಸಾಪ್ ಮಾಡಬಹುದು. ಅಥವಾ ಕರೆ ಮಾಡಬಹುದು. ನಿಮ್ಮ ದೂರನ್ನು ಪರಿಶೀಲಿಸಿ, ಅಂತಹ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲು ಮಾಧ್ಯಮವು ಬದ್ಧವಾಗಿದೆ.

ಇತ್ತೀಚಿನ ಸುದ್ದಿ