ಮಂಗಳೂರು-ಬೆಂಗಳೂರು-ಚೆನ್ನೈಗೆ  ಶಿರಾಡಿ ಘಾಟಿ ಸುರಂಗ ಮಾರ್ಗ | ಶೇ.30ರಷ್ಟು ಖಾಸಗಿ ಭೂಸ್ವಾಧೀನ? - Mahanayaka
8:39 AM Sunday 15 - September 2024

ಮಂಗಳೂರು-ಬೆಂಗಳೂರು-ಚೆನ್ನೈಗೆ  ಶಿರಾಡಿ ಘಾಟಿ ಸುರಂಗ ಮಾರ್ಗ | ಶೇ.30ರಷ್ಟು ಖಾಸಗಿ ಭೂಸ್ವಾಧೀನ?

20/11/2020

ಮಂಗಳೂರು: ಮಂಗಳೂರು-ಬೆಂಗಳೂರು-ಚೆನ್ನೈ ನಗರಗಳನ್ನು ಸಂಪರ್ಕಿಸುವ ಕರಾವಳಿ ಭಾಗದ ಶಿರಾಡಿ ಘಾಟಿ ಸುರಂಗ ಮಾರ್ಗ ನಿರ್ಮಾಣ ಯೋಜನೆಗೆ ಬಹುತೇಕ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಭೂಸ್ವಾಧೀನದ ಅಧಿಸೂಚನೆಗೆ ಇದೀಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಾಯುತ್ತಿದೆ ಎಂದು ವರದಿಯಾಗಿದೆ.

ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿಯಲ್ಲಿ ಅಡ್ಡಹೊಳೆಯಿಂದ ಸಕಲೇಶಪುರದ ಹೆಗ್ಗದ್ದೆ ವರೆಗಿನ 23.57 ಕಿ.ಮೀ. ಸುರಂಗ ಮಾರ್ಗ ನಿರ್ಮಾಣಕ್ಕೆ ಎಲ್ಲ ರೀತಿಯ ಪ್ರಾರಂಭೀಕ ಹಂತದ ತಯಾರಿ ಪೂರ್ಣಗೊಂಡಿದೆ, ಜನವರಿಯಲ್ಲಿ ಭೂಸ್ವಾಧೀನ ಅಧಿಸೂಚನೆ ಹೊರಬೀಳುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ.

ಈ ಯೋಜನೆಗೆ ಶೇ.30ರಷ್ಟು ಖಾಸಗಿ ಭೂಮಿಯನ್ನು ಸ್ವಾಧೀನ ಪಡೆಸಿಕೊಳ್ಳಲಾಗುವುದು ಎಂದು ಹೇಳಲಾಗುತ್ತಿದೆ.  ಈ ಸುರಂಗ ಮಾರ್ಗವು ಅಡ್ಡಹೊಳೆ, ಗುಂಡ್ಯ, ಎಡಕುಮೇರಿ, ಕಡಗರವಳ್ಳಿ, ಮಾರನಹಳ್ಳಿ ಮೂಲಕ ಸಾಗಲಿದ್ದು, 6 ಸುರಂಗ ಮತ್ತು 10 ಸೇತುವೆಗಳು ನಿರ್ಮಾಣವಾಗಲಿದೆ. ಈ ಯೋಜನೆಯು ಸುಮಾರು 12 ಸಾವಿರ ಕೋಟಿ ರೂ.ಗಳಿಂದ ನಿರ್ಮಾಣವಾಗಲಿದೆ ಎಂದು ತಿಳಿದು ಬಂದಿದೆ.


Provided by

ಇತ್ತೀಚಿನ ಸುದ್ದಿ