ಗೋಡೆಯಲ್ಲಿ ಕಮಲದ ಚಿತ್ರ ಬರೆದು ಗೋಬ್ಯಾಕ್ ಶೋಭಕ್ಕ ಅಭಿಯಾನಕ್ಕೆ ಶೋಭಾ ತಿರುಗೇಟು!
ಚಿಕ್ಕಮಗಳೂರು: ಗೋ ಬ್ಯಾಕ್ ಶೋಭಕ್ಕ ಅಭಿಯಾನದ ಮಧ್ಯೆ ಸಚಿವೆ ಶೋಭಾ ಕರಂದ್ಲಾಜೆ ತಾವೂ ಕೈಯಲ್ಲಿ ಬ್ರಷ್ ಹಿಡಿದು ಗೋಡೆಗಳಲ್ಲಿ ಕಮಲದ ಚಿತ್ರ ಬರೆದಿದ್ದಾರೆ.
ಗೋ ಬ್ಯಾಕ್ ಶೋಭಕ್ಕ, ಪತ್ರ ಚಳವಳಿ ಮಧ್ಯೆಯೂ ಶೋಭಾ ಕರಂದ್ಲಾಜೆ ಅಬ್ಬರದ ಪ್ರಚಾರ ಆರಂಭಿಸಿದ್ದಾರೆ. ರಸ್ತೆ ಬದಿ ಗೋಡೆ ಮೇಲೆ ಕಮಲದ ಹೂ ಚಿತ್ರ ಬಿಡಿಸಿದರು.
ಚಿಕ್ಕಮಗಳೂರು ನಗರದ ಜಯನಗರ ಬಡಾವಣೆಯಲ್ಲಿ ರಸ್ತೆ ಬದಿ ಗೋಡೆ ಮೇಲೆ ಕಮಲದ ಹೂ ಚಿತ್ರ ಬಿಡಿಸಿ ಶೋಭಾ ಕರಂದ್ಲಾಜೆ ಪ್ರಚಾರಕ್ಕೆ ಸಿಗ್ನಲ್ ನೀಡಿದ್ದಾರೆ.
ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡಬಾರದು ಅಂತ ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದ್ದರು. ಈ ಬಗ್ಗೆ ಪತ್ರ ಚಳುವಳಿ ಕೂಡ ಆರಂಭಿಸಿದ್ದರು. ಗೆದ್ದ ಬಳಿಕ ಉಡುಪಿ—ಚಿಕ್ಕಮಗಳೂರ ಕ್ಷೇತ್ರವನ್ನು ಶೋಭಾ ಕರಂದ್ಲಾಜೆ ಮರೆತೇ ಬಿಟ್ಟಿದ್ದರು. ಕೇಂದ್ರ ಸಚಿವರಾದ ಬಳಿವಂತೂ ಕ್ಷೇತ್ರ ಜನರ ಕೈಗೆ ಸಿಕ್ಕಿಲ್ಲ ಅನ್ನೋ ಆರೋಪ ಕಾರ್ಯಕರ್ತರಾಗಿದೆ.
ಕಾರ್ಯಕರ್ತರ ಆರೋಪ ಒಂದೆಡೆಯಾದರೆ ಇನ್ನೊಂದೆಡೆ ಕ್ಷೇತ್ರದ ಅಭಿವೃದ್ಧಿಗೆ ಶೋಭಾ ಕರಂದ್ಲಾಜೆ ಯಾವುದೇ ಒತ್ತು ನೀಡಿಲ್ಲ, ಕೇವಲ ಧರ್ಮದ ವಿಚಾರದಲ್ಲಿ ಭೇದ ಭಾವ ಸೃಷ್ಟಿಸುವ ಹೋರಾಟ ಮಾತ್ರವೇ ಸಾಕೆ? ಕ್ಷೇತ್ರಕ್ಕಾಗಿ ಏನು ಮಾಡಿದ್ದಾರೆ ಎಂಬ ನೂರಾರು ಪ್ರಶ್ನೆಗಳು ಕೂಡ ಕೇಳಿ ಬಂದಿವೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth