ತಂದೆಯನ್ನು ಹತ್ಯೆ ಮಾಡಿ ಹೃದಯಾಘಾತದ ಕಥೆಕಟ್ಟಿದ ಪುತ್ರನ ಬಂಧನ
ಹಾಸನ: ತಂದೆಯನ್ನು ಹತ್ಯೆ ಮಾಡಿ ಹೃದಯಾಘಾತ ಎಂದು ಕಥೆಕಟ್ಟಿದ್ದ ಪುತ್ರನೊಬ್ಬನನ್ನು ಪೊಲೀಸರು ಬಂಧಿಸಿದ ಘಟನೆ ಸಕಲೇಶಪುರದ ಲಿಂಗಾಪುರ ಗ್ರಾಮದಲ್ಲಿ ನಡೆದಿದೆ.
ದಿನೇಶ್(34) ಬಂಧಿತ ಆರೋಪಿಯಾಗಿದ್ದಾನೆ. ಈತನ ತಂದೆ ಶಶಿಧರ್(58) ಹತ್ಯೆಗೀಡಾದವರು ಎಂದು ತಿಳಿದು ಬಂದಿದೆ. ಘಟನೆ ನಡೆದ ದಿನ ದಿನೇಶ್ ಕುಡಿದು ಬಂದು ತಂದೆಯ ಜೊತೆಗೆ ಜಗಳವಾಡಿದ್ದಾನೆ. ಬಳಿಕ ತಂದೆಗೆ ಕಾಲಿನಿಂದ ಒದ್ದಿದ್ದ. ಇದರಿಂದಾಗಿ ಶಶಿಧರ್ ಕುಸಿದು ಬಿದ್ದಿದ್ದಾರೆ.
ಇದನ್ನು ಕಂಡು ದಿನೇಶ್ ನ ತಾಯಿ ಹೆದರಿ ಮನೆಯಿಂದ ಸಹೋದರನ ಮನೆಗೆ ತೆರಳಿದ್ದಾರೆ. ಇದೇ ವೇಳೆ ಕುಸಿದು ಬಿದ್ದ ತಂದೆಯನ್ನು ದಿನೇಶ್ ಅರೇಹಳ್ಳಿ ಆಸ್ಪತ್ರೆಗೆ ದಾಖಲಿಸಿದ್ದು, ಹೃದಯಾಘಾತವಾಗಿದೆ ಎಂದು ಬಿಂಬಿಸಿದ್ದ.
ಶಶಿಧರ್ ಸಾವನ್ನಪ್ಪಿರುವುದಾಗಿ ಆಸ್ಪತ್ರೆಯಲ್ಲಿ ವೈದ್ಯರು ದೃಢಪಡಿಸಿದ್ದರು. ಬಳಿಕ ಆರೋಪಿ ದಿನೇಶ್ ಅಂತ್ಯಸಂಸ್ಕಾರಕ್ಕೆ ತಂದೆಯ ಮೃತದೇಹವನ್ನು ತಂದ ವೇಳೆ ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದರು. ಇದೇ ವೇಳೆ ದಿನೇಶ್ ವಿರುದ್ಧ ಆತನ ತಾಯಿಯೇ ಅರೇಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: