SSLC Result:  550 ಅಂಕಗಳೊಂದಿಗೆ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾದ ಸುಳ್ಯದ ಸಫ್ವಾನ್ ಎಸ್.ಎಂ. - Mahanayaka

SSLC Result:  550 ಅಂಕಗಳೊಂದಿಗೆ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾದ ಸುಳ್ಯದ ಸಫ್ವಾನ್ ಎಸ್.ಎಂ.

safwan s m
10/05/2024


Provided by

ಸುಳ್ಯ: ತಾಲೂಕಿನ   ಅಜ್ಜಾವರ ಗ್ರಾಮದ ಮೇನಾಲ ನಿವಾಸಿ ಶಾಫಿ ಹಾಗೂ ಕೈರುನ್ನಿಸಾ ದಂಪತಿಗಳ ಪುತ್ರ ಸಫ್ವಾನ್ ಎಸ್.ಎಂ. 550 ಅಂಕಗಳೊಂದಿಗೆ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ.

ಸುಳ್ಯದ ಸರ್ಕಾರಿ ಪದವಿ ಪೂರ್ವ ಜೂನಿಯರ್ ಹೈಸ್ಕೂಲ್ ನ ವಿದ್ಯಾರ್ಥಿಯಾಗಿರುವ ಸಫ್ವಾನ್ ಎಸ್.ಎಂ. ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತಮ ಅಂಕಗಳಿಸುವ ಮೂಲಕ ತಮ್ಮ ಶಾಲೆಗೆ ಹಾಗೂ ಊರಿಗೆ ತಂದೆ ತಾಯಿಗೆ ಕೀರ್ತಿ ತಂದಿದ್ದಾರೆ.

ಸಫ್ವಾನ್  ಓರ್ವ ಬಹುಮುಖ ಪ್ರತಿಭೆಯಾಗಿದ್ದು, ಕಲಿಕೆಯ ಜೊತೆಗೆ ಕ್ರೀಡೆಯಲ್ಲೂ ಆಸಕ್ತಿ ಹೊಂದಿದ್ದಾರೆ. ಕ್ರಿಕೆಟ್, ಪುಟ್ ಬಾಲ್ ಆಟಗಾರನೂ ಹೌದು ಇವರಿಗೆ ಊರಿನ ಗಣ್ಯರು ಸಂಘ ಸಂಸ್ಥೆಗಳು ಮುಂದಿನ ವಿದ್ಯಾಭ್ಯಾಸ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ