ಸ್ಟಾರ್ ಹೀರೋಯಿನ್ ಕೀರ್ತಿ ಸುರೇಶ್ ಶೀಘ್ರದಲ್ಲೇ ಮದುವೆಯಾಗಲಿದ್ದಾರಂತೆ!: ಹುಡುಗ ಯಾರು?
ದಕ್ಷಿಣ ಭಾರತದ ಸ್ಟಾರ್ ಹೀರೋಯಿನ್ ಕೀರ್ತಿ ಸುರೇಶ್ ಶೀಘ್ರದಲ್ಲೇ ಮದುವೆಯಾಗಲಿದ್ದಾರಂತೆ. ಕೀರ್ತಿ ಸುರೇಶ್ ತಮ್ಮ ಗೆಳೆಯ ಆಂಟೋನಿ ಎಂಬುವವರನ್ನು ವಿವಾಹವಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.
ಕೀರ್ತಿ ಸುರೇಶ್ ಹಾಗೂ ಗೆಳೆಯ ಆಂಟೋನಿ 14 ವರ್ಷಗಳಿಂದ ಲವ್ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಹೀಗಾಗಿ ಕೀರ್ತಿ ಸುರೇಶ್ ತನ್ನಿಷ್ಟದ ಹುಡುಗನನ್ನು ತಾವೇ ಆಯ್ಕೆ ಮಾಡಿಕೊಂಡಿದ್ದಾರೆ. ಇದೀಗ ಅವರ ಮುಂದಿನ ಜೀವನವನ್ನು ತಮ್ಮ ಗೆಳೆಯನೊಟ್ಟಿಗೆ ಕಳೆಯಲು ನಿರ್ಧರಿಸಿದ್ದಾರೆ.
ಈ ಜೋಡಿ ಡಿಸೆಂಬರ್ 11 ರಂದು ಗೋವಾದಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್ ಮಾಡಿಕೊಳ್ಳಲಿದ್ದಾರೆ. ಈ ಹಿಂದೆ ಕೀರ್ತಿ ಸುರೇಶ್ ತಮ್ಮ ಪ್ರೀತಿ ಮತ್ತು ಮದುವೆ ಬಗ್ಗೆ ಎಷ್ಟು ಬಾರಿ ಟ್ರೋಲ್ ಆದರೂ ಆ ಬಗ್ಗೆ ಹೆಚ್ಚಿನ ಗಮನಕೊಡುತ್ತಿರಲಿಲ್ಲ. ಆದರೆ ಇದೀಗ ಮತ್ತೊಮ್ಮೆ ಕೀರ್ತಿ ಅವರ ಮದುವೆಯ ವದಂತಿಗಳು ಮುನ್ನೆಲೆಗೆ ಬಂದಿವೆ.
ಈ ಬಾರಿ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕು. ಈ ಬಾರಿ ಕೀರ್ತಿ ಸುರೇಶ್ ತಾನು ಮದುವೆ ಆಗುತ್ತಿರುವುದು ಹೌದು ಎಂದು ಹೇಳುತ್ತಾರಾ ಎಂದು ಕಾದು ನೋಡಬೇಕಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97