ನಾಲ್ಕು ಜನ ಆತ್ಮಹತ್ಯೆ ಮಾಡಿಕೊಂಡ ಮನೆಯಲ್ಲಿ ಕಾಣಿಸಿಕೊಂಡ ಬೆಳಕು: ಮನೆಗೆ ನುಗ್ಗಿ ನೋಡಿದಾಗ ಸತ್ಯ ಬಯಲು - Mahanayaka

ನಾಲ್ಕು ಜನ ಆತ್ಮಹತ್ಯೆ ಮಾಡಿಕೊಂಡ ಮನೆಯಲ್ಲಿ ಕಾಣಿಸಿಕೊಂಡ ಬೆಳಕು: ಮನೆಗೆ ನುಗ್ಗಿ ನೋಡಿದಾಗ ಸತ್ಯ ಬಯಲು

suicide
05/02/2022


Provided by

ಬೆಂಗಳೂರು: ಜನರು ಸತ್ಯಕ್ಕಿಂತಲೂ ಸುಳ್ಳುಗಳನ್ನು ಹೆಚ್ಚು ನಂಬುತ್ತಾರೆ. ಹೀಗಾಗಿಯೇ ಜನರ ಭಾವನೆಗಳನ್ನು ಬಳಸಿಕೊಂಡು ಬಹಳಷ್ಟು ಅನ್ಯಾಯಗಳು ಸಮಾಜದಲ್ಲಿ ಆಗುತ್ತಲೇ ಇರುತ್ತವೆ. ಕಳೆದ ವರ್ಷ ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಮಗುವನ್ನು ಕೊಂದು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿದ್ದ ಘಟನೆಯ ಬಳಿಕ ಆ ಮನೆಯನ್ನು ಜನರು ದೆವ್ವದ ಮನೆ ಎಂದೇ ನೋಡುತ್ತಿದ್ದಾರೆ.


Provided by

ನಾಲ್ವರು ಆತ್ಮಹತ್ಯೆ ಮಾಡಿಕೊಂಡ ಬಳಿಕ ಮನೆಯ ಯಜಮಾನ, ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪದಲ್ಲಿ ಜೈಲುಪಾಲಾಗಿದ್ದ. ಇತ್ತ ಮನೆಯಲ್ಲಿ ಕೂಡ ಯಾರೂ ವಾಸವಿಲ್ಲ. ಮನೆಯ ವಿದ್ಯುತ್ ಸಂಪರ್ಕವನ್ನು ಕಡಿತ ಮಾಡಿ ನಾಲ್ಕು ತಿಂಗಳು ಆಗಿದೆ. ಆದರೂ ಇದ್ದಕ್ಕಿದ್ದಂತೆ ಶಂಕರ್‍ ಮನೆಯಲ್ಲಿ ಬೆಳಕು ಕಾಣಿಸಿಕೊಂಡಿದೆ. ಇದನ್ನು ಕಂಡ ಸ್ಥಳೀಯರು ಭೀತರಾಗಿದ್ದು, ಇದು ದೆವ್ವದ್ದೇ ಕಾಟ ಅಂದುಕೊಂಡು ಶಂಕರ್‍ ಸಂಬಂಧಿಕರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ.

ಸ್ಥಳಕ್ಕೆ ಬಂದ ಶಂಕರ್‍ ಸಂಬಂಧಿಕರು ಧೈರ್ಯ ಮಾಡಿ ಮನೆಯ ಒಳಗೆ ನುಗ್ಗಿದಾಗ ವ್ಯಕ್ತಿಯೋರ್ವ ದೆವ್ವ ದೆವ್ವ ಎಂದು ಕಿರುಚುತ್ತಾ ಓಡುತ್ತಾ ಮನೆಯೊಳಗಿನಿಂದ ಹೊರಗೆ ಬಂದಿದ್ದಾನೆ. ತಕ್ಷಣವೇ ಆತನನ್ನು ಹಿಡಿದು ಸರಿಯಾಗಿ ವಿಚಾರಿಸಿದಾಗ, ಆತ ಒಬ್ಬ ಕಳ್ಳ, ಮನೆಯಲ್ಲಿದ್ದ ಚಿನ್ನಾಭರಣ ದೋಚಲು ಬಂದಿದ್ದ ಎನ್ನುವುದು ತಿಳಿದು ಬಂದಿದೆ ಎಂದು ವರದಿಯಾಗಿದೆ.


Provided by

ಜನರು ದೆವ್ವ ಅಂದುಕೊಂಡು ಮನೆಯೊಳಗೆ ಬಂದಿದ್ದರು. ಆದರೆ, ಕಳ್ಳ, ತನ್ನನ್ನೇ ಹಿಡಿಯಲು ಬಂದಿದ್ದಾರೆ ಎಂದು ಓವರ್‍ ಸೀನ್ ಮಾಡಿದ್ದ. ಇದೀಗ ಆರೋಪಿಯನ್ನು ಹಿಡಿದು ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಶೈಕ್ಷಣಿಕ ಸಾಧನೆಯ ಲೇಡಿ ಸಿಂಗಂ: ಡಾ.ಎನ್.ಲಕ್ಷ್ಮಿ

ಹಿಜಾಬ್ ವಿವಾದ: 6 ವಿದ್ಯಾರ್ಥಿನಿಯರನ್ನು ಸಸ್ಪೆಂಡ್ ಮಾಡಬೇಕಿತ್ತು | ಪ್ರಮೋದ್ ಮುತಾಲಿಕ್

ರಮೇಶ್ ಜಾರಕಿಹೊಳಿ ಅತ್ಯಾಚಾರ ಮಾಡಿದ್ದಾರೆನ್ನುವುದಕ್ಕೆ ಸಾಕ್ಷಿ ಇಲ್ಲ:  ಎಸ್ ಐಟಿಯಿಂದ ‘ಬಿ’ ರಿಪೋರ್ಟ್

ಬಿಎಸ್‌ ಪಿಯ ಮೊದಲ ಮಹಿಳಾ ರಾಷ್ಟ್ರೀಯ ವಕ್ತಾರರಾಗಿ ನಿರ್ಭಯ ಪ್ರಕರಣದ ವಕೀಲೆ ಸೀಮಾ ಕುಶ್ವಾಹಾ ನೇಮಕ

ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿಗಳಿಗೆ ಪಿ ಎಸ್ ಐ ಖಡಕ್‌ ಎಚ್ಚರಿಕೆ

ಇತ್ತೀಚಿನ ಸುದ್ದಿ