“ನಾನು ಕೂಡ ಬ್ರಾಹ್ಮಣ” | ಆಟದ ಮೈದಾನಕ್ಕೆ ಜಾತಿಯನ್ನು ಎಳೆದು ತಂದ ಸುರೇಶ್ ರೈನಾ - Mahanayaka
12:11 AM Wednesday 19 - March 2025

“ನಾನು ಕೂಡ ಬ್ರಾಹ್ಮಣ” | ಆಟದ ಮೈದಾನಕ್ಕೆ ಜಾತಿಯನ್ನು ಎಳೆದು ತಂದ ಸುರೇಶ್ ರೈನಾ

suresh raina
21/07/2021

ಚೆನ್ನೈ:  ತಮಿಳುನಾಡು ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಸಂದರ್ಭದಲ್ಲಿ ಕಾಮೆಂಟರಿ ಪ್ಯಾನೆಲ್‌ನಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿರುವ ಭಾರತದ ಮಾಜಿ ಆಲ್‌ ರೌಂಡರ್ ಸುರೇಶ್ ರೈನಾ ಜಾತಿಯನ್ನು ಎಳೆದು ತಂದು ಮಾತನಾಡಿರುವುದು ಇದೀಗ ಅವರ ಅಭಿಮಾನಿಗಳಿಗೆ ತೀವ್ರ ನೋವುಂಟು ಮಾಡಿದೆ.


Provided by

ಐಪಿಎಲ್‌ನಲ್ಲಿ ಕಳೆದ ಅನೇಕ ವರ್ಷಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ರೈನಾ ಅವರು ತಮಿಳುನಾಡಿನ ಸಂಸ್ಕೃತಿಗೆ ಹೇಗೆ ಹೊಂದಿಕೊಂಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರವಾಗಿ “ನಾನು ಕೂಡ ಬ್ರಾಹ್ಮಣ” ಎಂದು ಅವರು ಉತ್ತರಿಸಿದ್ದು, ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 ನಾನು ಕೂಡಾ ಬ್ರಾಹ್ಮಣನಾಗಿದ್ದೇನೆ. 2004ರಿಂದ ಚೆನ್ನೈನಲ್ಲಿ ಆಡುತ್ತಿದ್ದೇನೆ. ಇಲ್ಲಿನ ಸಂಸ್ಕೃತಿಯನ್ನು ಇಷ್ಟಪಡುತ್ತೇನೆ. ನನ್ನ ಸಹ ಆಟಗಾರರನ್ನು ಪ್ರೀತಿಸುತ್ತೇನೆ. ನಾನು ಅನಿರುದ್ಧ ಶ್ರೀಕಾಂತ್, ಬದ್ರಿ , ಬಾಲಾ ಭಾಯ್ ಅವರೊಂದಿಗೆ ಆಡಿದ್ದೇನೆ. ಅವರಿಂದ ನೀವು ಏನಾದರೂ ಒಳ್ಳೆಯದನ್ನು ಕಲಿಯಬೇಕು. ನಾನು ಚೆನ್ನೈ ಸಂಸ್ಕೃತಿಯನ್ನು ಪ್ರೀತಿಸುತ್ತೇನೆ. ಸಿಎಸ್‌ ಕೆ ಭಾಗವಾಗಲು ಸಾಧ್ಯವಾಗಿರುವುದು ನನ್ನ ಅದೃಷ್ಟ. ಇಲ್ಲಿ ಮತ್ತಷ್ಟು ಪಂದ್ಯಗಳನ್ನು ಆಡುವ ನಿರೀಕ್ಷೆಯಿದೆ ಎಂದು ರೈನಾ ಉತ್ತರಿಸಿದ್ದಾರೆ.


Provided by

ಇನ್ನೂ ರೈನಾ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೀಡಾಗಿದ್ದು,  ತಮಿಳುನಾಡು ಸಂಸ್ಕೃತಿಗೂ ನೀನು ಬ್ರಾಹ್ಮಣನಾಗಿರುವುದಕ್ಕೂ ಏನಯ್ಯಾ ಸಂಬಂಧ ಎಂದು ಟೀಕೆಗಳ ಸುರಿಮಳೆ ಕೇಳಿ ಬಂದಿದೆ.

https://twitter.com/JamesKL95/status/1417148507970887683?s=20

ಇನ್ನಷ್ಟು ಸುದ್ದಿಗಳು…

25-30 ಮಕ್ಕಳ ಮೇಲೆ ಬಾಣಸಿಗನಿಂದ ಲೈಂಗಿಕ ದೌರ್ಜನ್ಯ | ಕಿರುಕುಳದ ಬಳಿಕ ಈತ ಮಾಡುತ್ತಿದ್ದದ್ದೇನು ಗೊತ್ತಾ?

ಶಿಲ್ಪಾ ಶೆಟ್ಟಿಯ ಗಂಡ ಹಣ ಮಾಡಿದ್ದು ಹೇಗೆ? | ರಾಜ್ ಕುಂದ್ರಾ ಬಂಧನದ ಬೆನ್ನಲ್ಲೇ ವಿಡಿಯೋ ವೈರಲ್

ಶಿಲ್ಪಾ ಶೆಟ್ಟಿ ಗಂಡ ಮಾಡುತ್ತಿದ್ದದ್ದು ನೀಲಿ ಚಿತ್ರ ಅಲ್ಲ, ಕಾಮೋದ್ರೇಕಕಾರಿ ವಿಡಿಯೋ | ಮಾಡೆಲ್ ಹೇಳಿದ್ದೇನು?

“ಒಂದು ರೀತಿಯಲ್ಲಿ ಕನ್ನಡಿಗರು ನಪುಂಸಕರು” ಎಂದು ಭಗವಾನ್ ಹೇಳಿದ್ದೇಕೆ?

ಪತಿವ್ರತೆ ಎಂದು ಸಾಬೀತು ಪಡಿಸಲು ಮಹಿಳೆಯನ್ನು ಕುದಿಯುವ ಎಣ್ಣೆಗೆ ಕೈ ಹಾಕಿಸಿದರು!

ಇತ್ತೀಚಿನ ಸುದ್ದಿ