40 ಸೀರಿಯಲ್ ಗಳಲ್ಲಿ ನಟಿಸಿದ್ದ ಪ್ರತಿಭಾನ್ವಿತ ನಟ ಶ್ರೀಧರ್ ನಿಧನ!

40ಕ್ಕೂ ಅಧಿಕ ಸೀರಿಯಲ್‌ಗಳಲ್ಲಿ ನಟಿಸಿರುವ ನಟ ನಟ ಶ್ರೀಧರ್ ತಮ್ಮ 47ನೇ ವಯಸ್ಸಿನಲ್ಲೇ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಶ್ರೀಧರ್ ಮೇ 26 ರಂದು ರಾತ್ರಿ 10 ಗಂಟೆಗೆ ಚಿರನಿದ್ರೆಗೆ ಜಾರಿದ್ದಾರೆ.
ಒಂದು ತಿಂಗಳಿಗೂ ಅಧಿಕ ಕಾಲದಿಂದ ಆಸ್ಪತ್ರೆಯಲ್ಲಿ ಶ್ರೀಧರ್ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶ್ರೀಧರ್ ಇಹಲೋಕ ತ್ಯಜಿಸಿದ್ದಾರೆ.
ಶ್ರೀಧರ್ 40ಕ್ಕೂ ಅಧಿಕ ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಪಾರು ಧಾರಾವಾಹಿಯಲ್ಲಿ ಆದಿಯ ಚಿಕ್ಕಪ್ಪನ ಪಾತ್ರವನ್ನ ಶ್ರೀಧರ್ ನಿರ್ವಹಿಸಿದ್ದರು. ವಧು ಸೀರಿಯಲ್ ನಲ್ಲಿ ನಾಯಕಿ ವಧು ಚಿಕ್ಕಪ್ಪನ ಪಾತ್ರದಲ್ಲಿ ಶ್ರೀಧರ್ ಅಭಿನಯಿಸಿದ್ದರು. ಮಂಗಳ ಗೌರಿ, ಮನೆಯೇ ಮಂತ್ರಾಲಯ ಧಾರಾವಾಹಿಗಳಲ್ಲೂ ಶ್ರೀಧರ್ ಕಾಣಿಸಿಕೊಂಡಿದ್ದರು. ಕಿಚ್ಚ ಸುದೀಪ್, ಉಗ್ರಂ ಮಂಜು ನಟನೆಯ ‘ಮ್ಯಾಕ್ಸ್’ ಸೇರಿದಂತೆ ಹಲವು ಸಿನಿಮಾಗಳಲ್ಲೂ ಶ್ರೀಧರ್ ಮಿಂಚಿದ್ದರು.
ಆರೋಗ್ಯವಾಗಿಯೇ ಇದ್ದ ಶ್ರೀಧರ್ ಅವರಿಗೆ ಕೆಲವು ತಿಂಗಳ ಹಿಂದೆ ವಿಚಿತ್ರ ಇನ್ ಫೆಕ್ಷನ್ ಆಯ್ತು. ಆ ಸೋಂಕಿನಿಂದಾಗಿ ಶ್ರೀಧರ್ ತೀವ್ರ ಅಸ್ವಸ್ಥರಾಗಿದ್ದರು. ತಮ್ಮ ಹಣವೆಲ್ಲ ಚಿಕಿತ್ಸೆಗಾಗಿ ಬಳಸಿದರು. ಆದರೂ ಅವರ ಆರೋಗ್ಯ ಸುಧಾರಣೆ ಆಗಿರಲಿಲ್ಲ, ಕೊನೆಗೆ ಸಹಾಯ ಹಸ್ತ ಕೂಡ ಚಾಚಿದರೂ. ಆದರೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD