ತಾರಕಕ್ಕೇರಿದ ಸಾವರ್ಕರ್ ಫ್ಲೆಕ್ಸ್ ವಿವಾದ: ಪುತ್ಥಳಿ ನಿರ್ಮಿಸಿ ದಿಟ್ಟ ಉತ್ತರ ಕೊಡುತ್ತೇವೆ ಎಂದ ಬಿಜೆಪಿ ಮುಖಂಡ - Mahanayaka
10:09 PM Tuesday 18 - November 2025

ತಾರಕಕ್ಕೇರಿದ ಸಾವರ್ಕರ್ ಫ್ಲೆಕ್ಸ್ ವಿವಾದ: ಪುತ್ಥಳಿ ನಿರ್ಮಿಸಿ ದಿಟ್ಟ ಉತ್ತರ ಕೊಡುತ್ತೇವೆ ಎಂದ ಬಿಜೆಪಿ ಮುಖಂಡ

savarkar banar udupi
17/08/2022

ಉಡುಪಿ : ಬ್ರಹ್ಮಗಿರಿ ಸರ್ಕಲ್ ನಲ್ಲಿ ಹಾಕಲಾಗಿರುವ ಸಾವರ್ಕರ್ ಫ್ಲೆಕ್ಸ್ ವಿವಾದವು ತಾರಕಕ್ಕೇರಿದ್ದು ಬಿಜೆಪಿ ಮುಖಂಡ ಯಶ್ ಪಾಲ್ ಸುವರ್ಣ ನೇತೃತ್ವದಲ್ಲಿ ಇಂದು ಬೆಳಿಗ್ಗೆ ಸಾವರ್ ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು.

ಬಳಿಕ ಮಾತನಾಡಿದ ಅವರು ದೇಶದಲ್ಲಿ ಅಶಾಂತಿಯ ವಾತವರಣ ಸೃಷ್ಟಿ ಮಾಡುವುದು, ಕೋಮುಗಲಭೆಗೆ ಹುನ್ನಾರ ಕೊಡುವುದು, ಸಾರ್ವಜನಿಕ ಸೊತ್ತನ್ನು ನಾಶ ಮಾಡುವ ಹಿನ್ನಲೆ ಇರುವ ಪಿ.ಎಫ್.ಐ ಹಾಗು ಎಸ್.ಡಿ.ಪಿ.ಐ ಸಂಘಟನೆಗಳು 75 ನೇ ಸ್ವಾಂತ್ರೋತ್ಸವದ ಸಂದರ್ಭದಲ್ಲಿ ತಮ್ಮ ಚಾಳಿಯನ್ನು ಮುಂದುವರಿಸಿದೆ ಎಂದು ಆರೋಪಿಸಿದರು

ಪಿ.ಎಫ್.ಐ ಅವರು ಅನಾಗರಿಕರು. ಅನಾಗರಿಕರ ಬಗ್ಗೆ ನಾನು ಮಾತನಾಡುವುದಿಲ್ಲ. ಸರಕಾರ ಅವರನ್ನು ಮಟ್ಟ ಹಾಕುವ ಕೆಲಸ ಮಾಡುತ್ತಿದೆ. ಡೋಂಗಿ ದೇಶಭಕ್ತರನ್ನು ಕಾಂಗ್ರೆಸ್ ಇಟ್ಟುಕೊಂಡಿದೆ. ಕಾಂಗ್ರೆಸಿಗರು ಸ್ವಾತಂತ್ರ್ಯ ಸಂಗ್ರಾಮ ಮನೆ ಬಾಗಿಲಿನಿಂದ ಆರಂಭವಾಗಿದೆ ಎಂದು ಹೇಳುತ್ತಾರೆ. ಸಾರ್ವಕರ್ ಮತ್ತು ನೇತಾಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ್ದೇವೆ. ಮುಂದೆ ಸಾರ್ವಕರ್ ಅವರ ಪುತ್ಥಳಿ ನಿರ್ಮಿಸಿ ದಿಟ್ಟ ಉತ್ತರ ಕೊಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಹಾಗೂ ಸಂಘ ಪರಿವಾರದ ವಿವಿಧ ಮುಖಂಡರುಗಳು ಹಾಜರಿದ್ದರು  ಸ್ಥಳದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.  ಫ್ಲೆಕ್ಸ್ ಇಕ್ಕೆಲಗಳಲ್ಲಿ ಅಳವಡಿಸಲಾದ ಕೇಸರಿ ಧ್ವಜವನ್ನು ಅನುಮತಿ ಇಲ್ಲ ಎಂಬ ಕಾರಣ ಒಡ್ಡಿ ಪೊಲೀಸರು ತೆರವುಗೊಳಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ