ಮೊದಲ ಹಂತದ ಹೋರಾಟ ಯಶಸ್ವಿ: ಎರಡನೇ ಹಂತದ ಹೋರಾಟಕ್ಕೆ ಅಣಿ: ವಚನಾನಂದ ಮಹಾಸ್ವಾಮಿಗಳು - Mahanayaka
9:42 AM Friday 11 - September 2026

ಮೊದಲ ಹಂತದ ಹೋರಾಟ ಯಶಸ್ವಿ: ಎರಡನೇ ಹಂತದ ಹೋರಾಟಕ್ಕೆ ಅಣಿ: ವಚನಾನಂದ ಮಹಾಸ್ವಾಮಿಗಳು

swamijji
25/03/2023

ಬೆಂಗಳೂರು: 3 ದಶಕಗಳ ಮೊದಲ ಹಂತದ ಹೋರಾಟ ಇಂದು ಯಶಸ್ಸು ಕಂಡಿದೆ, ಪಂಚಮಸಾಲಿ ಸಮುದಾಯದ ಪ್ರತಿಯೊಬ್ಬರಿಗೂ ಮೀಸಲಾತಿಯ ಲಾಭ ದೊರಕಿಸಿಕೊಡುವ ಎರಡನೇ ಹಂತದ ಹೋರಾಟಕ್ಕೆ ಹರಿಹರ ಪೀಠ ಅಣಿಯಾಗಿದೆ ಎಂದು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀಶ್ರೀಶ್ರೀ ವಚನಾನಂದ ಮಹಾಸ್ವಾಮಿಗಳು ಪ್ರತಿಕ್ರಿಯಿಸಿದರು.

ಇಂದು ರಾಜ್ಯ ಸರಕಾರ ಪಂಚಮಸಾಲಿ ಸಮುದಾಯಕ್ಕೆ 2 ಡಿ ಮೀಸಲಾತಿಯ ಮೂಲಕ ಶೇಕಡಾ 7 ರಷ್ಟು ಪ್ರಾತಿನಿಧ್ಯ ನೀಡುವ ಸ್ಪಷ್ಟ ನಿರ್ಧಾರದ ಘೋಷಣೆಯ ನಂತರ ಮಾಧ್ಯಮಗಳಿಗೆ ಈ ಪ್ರತಿಕ್ರಿಯೆ ನೀಡಿದರು. ಹರಿಹರ ಪಂಚಮಸಾಲಿ ಪೀಠ ಸಮುದಾಯಕ್ಕೆ ಮೀಸಲಾತಿಯನ್ನು ದೊರಕಿಸಿಕೊಡುವ ಪ್ರಾಥಮಿಕ ಗುರಿಯ ಹಿನ್ನಲೆಯಲ್ಲಿ ಸ್ಥಾಪಿಸಲಾದ ಪೀಠವಾಗಿದೆ. ಈ ಪೀಠದ ಪೀಠಾಧ್ಯಕ್ಷರಾದ ನಂತರ ಹೋರಾಟವನ್ನ ಮತ್ತುಷ್ಟು ತೀವ್ರಗೊಳಿಸಿದ್ದೇವು.

ಈ ಹೋರಾಟವನ್ನ ಸೂಕ್ತ ರೀತಿಯಲ್ಲಿ ಮುನ್ನಡೆಸುವ ಮೂಲಕ ಆಯೋಗಕ್ಕೆ ಸೂಕ್ತ ದಾಖಲಾತಿಯನ್ನ ಸಲ್ಲಿಸಿದ್ದೇವು. ಸೂಕ್ತ ದಾಖಲಾತಿ ಹಾಗೂ ಸಮರ್ಪಕವಾದ ವಾದದ ಪರಿಣಾಮವಾಗಿ ಹಿಂದುಳಿದ ಆಯೋಗ ಮಧ್ಯಂತರ ವರದಿಯನ್ನು ನೀಡಿದೆ. ಈ ವರದಿಯ ಅನ್ವಯ ಹಾಗೂ ರಾಷ್ಟ್ರೀಯ ನಾಯಕರೊಂದಿಗಿನ ಚರ್ಚೆ ಫಲ ನೀಡಿದ್ದು, ಇಂದು ಮೀಸಲಾತಿಯ ಸ್ಪಷ್ಟ ಚಿತ್ರಣ ದೊರೆತಿದೆ. ಇದನ್ನ ನಾವು ಸ್ವಾಗತಿಸುತ್ತೇವೆ.

ನಮ್ಮ ಸಮುದಾಯಕ್ಕೆ ಶೈಕ್ಷಣಿಕ ಹಾಗೂ ಸಾಮಾಜಿಕ ಮತ್ತು ಉದ್ಯೋಗದಲ್ಲಿ ಮೀಸಲಾತಿ ದೊರೆಯುವುದು ಅಗತ್ಯವಿತ್ತು. ಅದು ಇಂದು ಈಡೇರಿದೆ. ಆದರೆ, ಅದು ಅನುಷ್ಠಾನಗೊಂಡು ನಮ್ಮ ಸಮುದಾಯದ ಎಲ್ಲರಿಗೂ ಅದರ ಸದುಪಯೋಗ ಆಗಬೇಕು. ಈ ನಿಟ್ಟಿನಲ್ಲಿ ನಾವು ಕಾನೂನಾತ್ಮಕವಾಗಿ ಹಾಗೂ ಸಾಂವಿಧಾನತ್ಮಕವಾಗಿ ಎರಡನೇ ಹಂತದ ಹೋರಾಟದಲ್ಲಿ ತೊಡಗಿಕೊಳ್ಳುತ್ತೇವೆ. ಎಲ್ಲರಿಗೂ ಮೀಸಲಾತಿಯ ಲಾಭ ದೊರಕಿಸಿಕೊಡುವ ವರೆಗೂ ವಿಶ್ರಮಿಸುವುದಿಲ್ಲ.

ಈಗಾಗಲೇ ಕೇಂದ್ರ ಓಬಿಸಿಯ ಪಟ್ಟಿನಲ್ಲಿ ಪಂಚಮಸಾಲಿಗಳನ್ನ ಸೇರಿಸಬೇಕು ಎನ್ನುವ ಪ್ರಸ್ತಾಪ ಮುಖ್ಯ ಕಾರ್ಯದರ್ಶಿಗಳ ಮುಂದಿದೆ. ಕೇಂದ್ರ ಸರಕಾರ ನಮ್ಮ ಮನವಿಯನ್ನು ಇಲ್ಲಿಗೆ ವರ್ಗಾಯಿಸಿದ್ದು ಅದರ ಬಗ್ಗೆಯೂ ನಿರಂತರ ಹೋರಾಟ ನಡೆಯಲಿದೆ ಎಂದು ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti