ಬ್ಯಾಗ್ ನಲ್ಲಿ ಬಾಂಬ್ ಇದೆ ಎಂದ ವ್ಯಕ್ತಿ: ಸಿಎಂ ನಿವಾಸದ ಮುಂದೆ ನಡೆದಿದ್ದೇನು? - Mahanayaka
7:31 PM Thursday 14 - November 2024

ಬ್ಯಾಗ್ ನಲ್ಲಿ ಬಾಂಬ್ ಇದೆ ಎಂದ ವ್ಯಕ್ತಿ: ಸಿಎಂ ನಿವಾಸದ ಮುಂದೆ ನಡೆದಿದ್ದೇನು?

police
24/08/2024

ಬೆಂಗಳೂರು: ಸಿಎಂ ಸಿದ್ದರಾಮಯ್ಯನವರನ್ನು ಭೇಟಿಯಾಗಲು ಅವಕಾಶ ಸಿಗಲಿಲ್ಲ ಎಂಬ ಆಕ್ರೋಶದಲ್ಲಿ ವ್ಯಕ್ತಿಯೊಬ್ಬ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ಸಿಎಂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾವೇರಿ ನಿವಾಸದ ಮುಂದೆ ನಡೆದಿದೆ.

ಇಂದು ಬೆಳಗ್ಗೆ ಈ ಘಟನೆ ನಡೆಯಿತು. ಸಿಎಂ ಸಿದ್ದರಾಮಯ್ಯ ಗಾಂಧಿ ಭವನಕ್ಕೆ ಕಾರ್ಯಕ್ರಮವೊಂದಕ್ಕೆ ತೆರಳಿದ್ದರು. ಇತ್ತ ವೃದ್ಧರೊಬ್ಬರು ಸಿಎಂಗೆ ಮನವಿ ಕೊಡಲು ಬಂದಿದ್ದು, ಈ ವೇಳೆ ಪೊಲೀಸರು ತಡೆದು, ಸಿಎಂ ಬರುವಾಗ ಮನವಿ ಕೊಡಲು ಹೇಳಿದ್ದಾರೆ. ಇದರಿಂದ ವೃದ್ಧ ಕೋಪಿಸಿಕೊಂಡು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏನ್ರೀ ಹೊಡೀತೀರೇನ್ರಿ, ನನ್ನ ಮೈಮುಟ್ಟ ಬೇಡಿ. ದೂರ ನಿಂತು ಮಾತಾಡಿ, ತಳ್ಳಬೇಡಿ. ಹಿರಿಯ ನಾಗರಿಕರಿಗೆ ಗೌರವ ಕೊಡೋದು ಇದೇನಾ? ಎಂದು ವೃದ್ಧ ಆಕ್ರೋಶ ವ್ಯಕ್ತಪಡಿಸಿದ್ದಾನೆ.

ಈ ವೇಳೆ ಪೊಲೀಸರು, ನಾವು ನಿಮ್ಮನ್ನು ಓಡಿಸಿದೇವೇನ್ರಿ… ಸಿಎಂ ಬರುವವರೆಗೆ ಕಾಯಲು ಹೇಳಿದ್ದೇವೆ ಅಷ್ಟೆ ಎಂದಿದ್ದಾರೆ. ಬದಿಯಲ್ಲಿ ನಿಂತುಕೊಳ್ಳಿ ಎಂದು ಹೇಳಿದ್ದಾರೆ. ಆದರೆ ಪೊಲೀಸರ ಮಾತಿನಿಂದ ವೃದ್ಧ ತೃಪ್ತನಾಗದೇ ಪೊಲೀಸರ ವಿರುದ್ಧ ಮತ್ತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾನೆ.




ಇದೇ ವೇಳೆ ವೃದ್ಧನ ಬಳಿಯಿದ್ದ ಬ್ಯಾಗ್ ನಲ್ಲಿ ಏನಿದೆ ಎಂದು ಪೊಲೀಸರು ಪ್ರಶ್ನಿಸಿದ ವೇಳೆ ಬ್ಯಾಗ್ ನಲ್ಲಿ ಬಾಂಬ್ ಇದೆ ಎಂದು ಕೋಪದಿಂದ ಹೇಳಿದ್ದಾರೆ.  ಈ ವೇಳೆ ಪೊಲೀಸರು ಆಯ್ತು ಹೋಗಪ್ಪ ಎಂದು ಕಳಿಸಿದ್ದಾರೆ.

ವರದಿಗಳ ಪ್ರಕಾರ ವ್ಯಕ್ತಿಯನ್ನು ಕೊನೆಗೆ ಗೃಹ ಕಚೇರಿ ಕೃಷ್ಣಾಕ್ಕೆ ಕರೆದೊಯ್ದು ಆತನ ಮನವಿ ಸ್ವೀಕರಿಸಲಾಗಿದೆ ಎಂದು ತಿಳಿದು ಬಂದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ