ಪೆಟ್ರೋಲ್, ಡೀಸೆಲ್ GST ವ್ಯಾಪ್ತಿಗೆ ತರಲು ಚಿಂತನೆ: ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ - Mahanayaka
1:25 PM Wednesday 11 - December 2024

ಪೆಟ್ರೋಲ್, ಡೀಸೆಲ್ GST ವ್ಯಾಪ್ತಿಗೆ ತರಲು ಚಿಂತನೆ: ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ

petrol diesel gst
28/09/2024

ಪುಣೆ: ಪೆಟ್ರೋಲ್, ಡೀಸೆಲ್ ಅನ್ನು ಸರಕು ಮತ್ತು ಸೇವಾ ತೆರಿಗೆ(GST) ವ್ಯಾಪ್ತಿಗೆ ತರಲು ನಾನು ಸಲಹೆಯನ್ನು ಕೇಳಿದ್ದೇನೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಕರೆ ನೀಡಿದ್ದಾರೆ.

ಪುಣೆ ಇಂಟರ್‌ನ್ಯಾಶನಲ್ ಸೆಂಟರ್ನ (ಪಿಐಸಿ) 14ನೇ ಸಂಸ್ಥಾಪನಾ ದಿನದ ಉಪನ್ಯಾಸದಲ್ಲಿ ಮುಂಬರುವ ದಶಕದಲ್ಲಿ ಭಾರತದ ಇಂಧನ ಭದ್ರತೆಯನ್ನು ಹೆಚ್ಚಿಸುವ ಕಾರ್ಯತಂತ್ರ ಮತ್ತು ಕ್ರಮಗಳು ಕುರಿತು ಉಪನ್ಯಾಸ ನೀಡಿದ ಅವರು ಈ ಕರೆ ನೀಡಿದ್ದಾರೆ.

ಜಿಎಸ್ ಟಿ ಅಡಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ನಾನು ಬಹಳ ಸಮಯದಿಂದ ಪ್ರತಿಪಾದಿಸುತ್ತಾ ಬಂದಿದ್ದೇನೆ, ಈಗ ನನ್ನ ಹಿರಿಯ ಸಹೋದ್ಯೋಗಿ, ಹಣಕಾಸು ಮಂತ್ರಿ ಕೂಡ ಹಲವಾರು ಸಂದರ್ಭಗಳಲ್ಲಿ ಇಂಧನವನ್ನು ಜಿಎಸ್ ‍ಟಿ ಅಡಿಯಲ್ಲಿ ತರುವ ಬಗ್ಗೆ ಮಾತನಾಡಿದ್ದಾರೆ ಎಂದು ನನಗೆ ಖಚಿತವಾಗಿದೆ ಎಂದು ತಿಳಿಸಿದ್ದಾರೆ.

ಜಿಎಸ್ ಟಿ ಅಡಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ನ್ನು ತರಲು ಎಲ್ಲಾ ರಾಜ್ಯಗಳಿಂದ ಸರ್ವಾನುಮತದ ಅನುಮೋದನೆಯ ಅಗತ್ಯವಿದೆ ಎಂದು ಪುರಿ ಒತ್ತಿ ಹೇಳಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ